ಕುಂಬಳೆ: ಸಪ್ತ ಸಂಗಮ ಭೂಮಿ ನಮ್ಮ ಕಾಸರಗೊಡು. ಇಲ್ಲಿನ ಸಂಸ್ಕøತಿ ಉಳಿಯಬೇಕಾದರೆ ನಮಗೆ ಚರಿತ್ರೆ ತಿಳಿಯಬೇಕು. ಅದನ್ನು ಕರಗತ ಮಾಡಿಕೊಳ್ಳಲು ಹಾಗೂ ಮುಂದಿನ ಜನಾಂಗಕ್ಕೆ ಹಂಚಲು ಓದುವಿಕೆ ಹಾಗೂ ಬರವಣಿಗೆ ಅಗತ್ಯ ಎಂದು ಸಿರಿಗನ್ನಡ ವೇದಿಕೆ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ವಿ.ಬಿ.ಕುಳಮರ್ವ ಹೇಳಿದರು.
ಕೇರಳ ಶಿಕ್ಷಣ ಇಲಾಖೆಯ ಊರ ಪ್ರತಿಭೆಗಳ ಭೇಟಿ ಕಾರ್ಯಕ್ರಮದ ಅಂಗವಾಗಿ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಅವರು ತಮ್ಮ ಸ್ವಗೃಹದಲ್ಲಿ ಸಂವಾದ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ಪುಸ್ತಕ ಸಂಗ್ರಹವನ್ನು ಮಕ್ಕಳು ವೀಕ್ಷಿಸಿದರು. ಪುರಾತನ ಕಾಲದ ತಾಳೆ ಗರಿಯನ್ನು ಗಮನಿಸಿ ಬರವಣಿಗೆಯ ಮಹತ್ವವನ್ನು ತಿಳಿದುಕೊಂಡರು. ವೇದಿಕೆಯಲ್ಲಿ ಲಲಿತಾ ಲಕ್ಷ್ಮಿ ಉಪಸ್ಥಿತರಿದ್ದರು. ಅಧ್ಯಾಪಕ ಸಶಿಕಲಾ, ಸಿಸ್ಟರ್ ಆಶಾ ಹಾಗೂ ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ಭಾಗವಹಿಸಿದರು. ವಿದ್ಯಾರ್ಥಿ ನಾಯಕಿ ವರ್ಷ ಸ್ವಾಗತಿಸಿದರು. ಚಿಂತನ್ ಕುಮಾರ್ ವಂದಿಸಿದರು.