ಮಂಜೇಶ್ವರ: ವರ್ಕಾಡಿ ಗ್ರಾಮಪಂಚಾಯತಿಯ ಈ ವರ್ಷದ ಕೇರಳೋತ್ಸವ ನ.೧೪ರಿಂದ ೧೭ ವರೆಗೆ ಸ್ಥಳೀಯ ಎಸ್.ವಿ.ವಿ.ಎ.ಯು.ಪಿ. ಶಾಲೆಯಲ್ಲಿ ನಡೆಯಲಿದೆ. ಈ ಸಂಬAಧ ಸಂಘಟಕ ಸಮಿತಿ ಸಭೆ ಸ್ಥಳೀಯ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಜರಗಿತು. ಪಂಚಾಯತಿ ಅಧ್ಯಕ್ಷ ಮಜೀದ್ ಬಿ.ಎ. ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ವಿವಿಧ ಕ್ಲಬ್‌ಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯದರ್ಶಿ ರಾಜೇಶ್ವರಿ ಸ್ವಾಗತಿಸಿದ್ದರು. ಸಿಬ್ಬಂದಿ ವಿನೋದ್ ಕೃಷ್ಣ ಕೇರಳೋತ್ಸವ ಕುರಿತು ಮಾಹಿತಿ ನೀಡಿದರು. ಯುವ ಸಂಚಾಲಕ ಜಯಪ್ರಕಾಶ್ ವಂದಿಸಿದರು.