ಪೆರ್ಲ: ಶೇಣಿಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯು ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕೇವಲ ಮೂರು ಅಂಕಗಳಿAದ ಚಾಂಪಿಯನ್ ಪಟ್ಟ ನಷ್ಟಗೊಂಡು ರನ್ನರ್ ಅಪ್ ಪಟ್ಟ ಪಡೆಯಿತು.
ಕಳೆದ ಮೂರು ವರ್ಷಗಳಿಂದ ಚಾಂಪಿಯನ್ ಪಟ್ಟಗಳಿಸುತಿದ್ದ ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆ ಈ ಬಾರಿ ೧೭೮ ಅಂಕಗಳಿಸಿ ಮೂರು ಅಂಕಗಳ ಹಿನ್ನಡೆಯಿಂದ ಎರಡನೇ ಸ್ಥಾನ ಪಡೆಯಿತು. ಮುಳ್ಳೇರಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ೧೮೧ ಅಂಕಗಳಿಸಿ ಪ್ರಥಮ ಸ್ಥಾನಕ್ಕೆ ಅರ್ಹವಾಯಿತು.ನಾಟಕದಲ್ಲಿ ಕೃಷಿಕನ ಪಾತ್ರ ವಹಿಸಿದ ಪ್ಲಸ್- ಟು ವಿಭಾಗದ ಮಹೇಶ್ ಉತ್ತಮ ನಟ ಪ್ರಶಸ್ತಿಗೆ ಪಾತ್ರವಾದರು. ಗುಂಪು ಸ್ಪರ್ಧೆಗಳಾದ ತಿರುವಾದಿರ,ದಫ್ ಮುಟ್ ,ಒಪ್ಪನ ಹಾಗೂ ಸಮೂಹ ಗಾನ ದಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ, ನಾಟಕ,ಇಂಗ್ಲಿಷ್ ಸ್ಕಿಟ್,ಕೋಲ್ ಕಳಿ,ಎಂಬೀ ಸ್ಪರ್ಧೆಗಳಲ್ಲಿ ಎ ಗ್ರೇಡ್ ನೊಂದಿಗೆ ದ್ವೀತಿಯ ಸ್ಥಾನವನ್ನು ಪಡೆಯಿತು.ವೈಯುಕ್ತಿಕ ಸ್ಪರ್ಧೆಗಳಾದ ಹಿಂದಿ ಬಾಷಣ,ಮೋಹಿನಿಯಾಟ್ಟಂ, ಕೇರಳ ನಡನಮ್,ಹಿಂದಿ ಉಪನ್ಯಾಸ ದಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನಗಳಿಸಿತು.
ವಿದ್ಯಾರ್ಥಿಗಳ ವಿಜಯಕ್ಕೆ ಶಾಲಾ ಪ್ರಬಂಧಕ ಮಿತ್ತೂರು ಪುರುಷೋತ್ತಮ ಭಟ್, ಶ್ರೀಸುಬ್ರಹ್ಮಣ್ಯೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಂಜೀವ ರೈ, ಪ್ರಾಂಶುಪಾಲ ಪದ್ಮನಾಭ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಅಧ್ಯಾಪಕರದ ಸರಸ್ವತಿ ಪ್ರಸನ್ನ,ರಾಜೇಶ್ ಸಿ ಎಚ್,ರಮಣಿ ಎಂ ಎಸ್,ಕೃಷ್ಣ ಕುಮಾರಿ,ವಾಣಿ ಶ್ರೀ,ವಾಣಿ.ಕೆ, ಬಾಲಕೃಷ್ಣ, ಸುರೇಶ್,ಗೋವಿಂದನ್ ನಂಬೂದಿರಿ,ಶ್ರೀವಿದ್ಯಾ,ಸAದೀಪ್ ಕುಮಾರ್,ಈಶ್ವರ ನಾಯಕ್, ಮಹೇಶ ಏತಡ್ಕ, ಸುಪ್ರೀತ್,ಕೃಷ್ಣನ್ ನಂಬೂದಿರಿ ನೇತೃತ್ವ ವಹಿಸಿದರು. ಸಹಾಯಕ ಸಿಬ್ಬಂದಿಗಳಾದ ಸಂಕಪ್ಪ,ಹನೀಫ್ ಸಹಕರಿಸಿದರು.