ಸಹರಾನ್ಪುರ್: ಆಯೋಧ್ಯೆ ರಾಮ ಮಂದಿರ ಆಂದೋಲನ ನಾಯಕ ಅಶೋಕ್ ಸಿಂಘಾಲ್ ಹಾಗೂ ಹುತಾತ್ಮ ಕರಸೇವಕರ ಸ್ಮರಣೆಗಾಗಿ ಭವ್ಯ ಸ್ಮಾರಕವೊಂದನ್ನು ನಿರ್ಮಿಸಲು ವಿಶ್ವ ಹಿಂದೂ ಪರಿಷತ್-ವಿಎಚ್ ಪಿ ಯೋಚಿಸುತ್ತಿದೆ ಎಂದು ಸಂಘಟನೆಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಅಲಿಯಾಸ್ ಪಂಕಜ್ ತಿಳಿಸಿದ್ದಾರೆ.
ಅಶೋಕ್ ಸಿಂಘಾಲ್ ಅವರು, ತಮ್ಮ ಇಡೀ ಜೀವನವನ್ನು ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕೆಂಬ ಆಂದೋಲನಕ್ಕೆ ಸಮರ್ಪಿಸಿಕೊಂಡಿದ್ದರು. ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಹಾದಿ ಸುಗಮಗೊಳಿಸುವ ಮೂಲಕ ಕೋಟ್ಯಾಂತರ ಹಿಂದೂಗಳ ನಂಬಿಕೆ ಹಾಗೂ ಭಾವನೆಗಳನ್ನು ಗೌರವಿಸಿದೆ ಎಂದು ಹೇಳಿದರು. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಧಾನಿ ನರೇಂದ್ರ ಮೋದಿ ದೇಗುಲ ನಿರ್ಮಾಣಕ್ಕೆ ಟ್ರಸ್ಟ್ ರಚಿಸಲಿದ್ದಾರೆ. ಆಯೋಧ್ಯೆಯನ್ನು ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ದಿ ಪಡಿಸಲು ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಸರ್ಕಾರ ಯೋಜನೆ ರೂಪಿಸಿದ್ದು, ಇದರಿಂದ ಇಡೀ ಪ್ರದೇಶ ಅಭಿವೃದ್ದಿಯಾಗಲಿದೆ ಎಂದು ಪಂಕಜ್ ಆಶಯ ವ್ಯಕ್ತಪಡಿಸಿದರು.