HEALTH TIPS

ಭಾಷಾ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟ : ನ್ಯಾಯವಾದಿ ಕೆ.ಶ್ರೀಕಾಂತ್

 
     ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ಭಾಷಾ ಅಲ್ಪಸಂಖ್ಯಾಕರು ನಡೆಸುತ್ತಿರುವ ಹೋರಾಟ ಇನ್ನಿತರ ಭಾಷೆ, ಸರಕಾರ, ಅಧಿಕಾರಿಗಳ ವಿರುದ್ಧವಲ್ಲ. ಬದಲಾಗಿ ಭಾಷಾ ಅಲ್ಪಸಂಖ್ಯಾಕರ ಮೇಲಿನ ದೌರ್ಜನ್ಯದ ವಿರುದ್ಧವಾಗಿದೆ. ಗಡಿನಾಡಿನಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ನೀಡಿರುವ ಸಂವಿಧಾನಬದ್ಧ ಹಕ್ಕು, ಸವಲತ್ತುಗಳನ್ನು ಉಳಿಸಿಕೊಳ್ಳಲು ಹಾಗು ಕಿತ್ತುಕೊಳ್ಳುವ ಪ್ರವೃತ್ತಿಯ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಎಂದು ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಹೇಳಿದರು.
      ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ನೇತೃತ್ವದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಆಯೋಜಿಸಿದ ಕಾಸರಗೋಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ `ಕಾಸರಗೋಡು ರಾಜ್ಯೋತ್ಸವ ಪ್ರಶಸ್ತಿ' ಸ್ವೀಕರಿಸಿ ಅವರು ಮಾತನಾಡಿದರು.
     ಕಾಸರಗೋಡಿನ ಕನ್ನಡಿಗರು ಭಾಷಾ ಮೂಲಭೂತವಾದಿಗಳಲ್ಲ. ಬದಲಾಗಿ ಸಂವಿಧಾನಬದ್ಧ ನಮ್ಮ ಹಕ್ಕು, ಸವಲತ್ತು ಸಂರಕ್ಷಿಸಿಕೊಳ್ಳುವುದಕ್ಕಾಗಿ ನಿರಂತರವಾಗಿ ಹೋರಾಟ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ಪ್ರತಿನಿಧೀಕರಿಸುವ ಬಿಜೆಪಿಯ ನಾಯಕತ್ವದಲ್ಲಿ ಈ ಹೋರಾಟ ನಡೆಸಲು ಮುಂಚೂಣಿಯಲ್ಲಿದ್ದೇನೆ. ಈ ಪ್ರಶಸ್ತಿ ನನಗೊಬ್ಬನಿಗಲ್ಲ. ಇದು ಕಾಸರಗೋಡಿನ ಸರ್ವ ಕನ್ನಡಿಗರಿಗೆ ಮತ್ತು ನನ್ನ ಪಕ್ಷದ ಕಾರ್ಯಕರ್ತರಿಗೆ ಸೇರಿದ್ದು ಎಂದರು.
    ಕನ್ನಡಿಗರಿಗೆ ಎಲ್ಲಾ ಭಾಷೆಗಳ ಬಗ್ಗೆ ಗೌರವವಿದೆ. ಎಲ್ಲಾ ಜನರನ್ನು ಗೌರವಿಸುತ್ತಿದ್ದಾರೆ. ಅದೇ ರೀತಿ ಕೇರಳ ಸರಕಾರವು ಎಲ್ಲಾ ಭಾಷಿಗರನ್ನು ಪ್ರೀತಿಸಬೇಕು, ಗೌರವಿಸಬೇಕು ಎಂದ ಅವರು ಕಾಸರಗೋಡಿನ ಕನ್ನಡಿಗರು ಇನ್ನೂ ಇಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡದ ಹೋರಾಟದ ಕಿಚ್ಚು ಇನ್ನೂ ಆರಿಲ್ಲ. ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನ ಮತ್ತು ಆ ಬಳಿಕ ನಡೆದ ವಿವಿಧ ಹೋರಾಟಗಳೇ ಸಾಕ್ಷಿ ಎಂದರು. ನಮ್ಮ ಹೋರಾಟದ ಫಲವಾಗಿ ಕೇಂದ್ರ ವಿ.ವಿ. ಕನ್ನಡಕ್ಕೆ ಪುಷ್ಟಿ ಕೊಡಲು ಕನ್ನಡ ಸ್ನಾತಕೋತ್ತರ ಹಾಗು ಸಂಶೋಧನಾ ವಿಭಾಗ ತೆರೆದಿದೆ ಎಂದರು.
       ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗನಟ, ಚಲನಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಅವರು ಮಾತನಾಡಿ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರಲ್ಲಿರುವ ಭಾಷಾ ಪ್ರೇಮ ಕರ್ನಾಟಕದ ಜನತೆಗೂ ಮಾದರಿಯಾಗಿದೆ. ಕನ್ನಡ ಮತ್ತು ತುಳು ಭಾಷೆಗಳು ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣಿಗೆ ನೋವಾದಾಗ ಇನ್ನೊಂದು ಕಣ್ಣಿಗೂ ಕೂಡಾ ನೋವಾಗುತ್ತದೆ. ಅದೇ ರೀತಿ ಈ ಎರಡು ಭಾಷೆಗಳಲ್ಲಿ ಒಂದು ಭಾಷಿಗರಿಗೆ ನೋವಾದಾಗ ಇನ್ನೊಂದು ಭಾಷಿಗರಿಗೆ ನೋವು ಸಹಜವಾಗಿಯೇ ಉಂಟಾಗುತ್ತದೆ ಎಂದರು. ನನ್ನ ರಂಗಭೂಮಿ ನಂಟು ಕಾಸರಗೋಡಿನಿಂದಲೇ ಆರೊಂಭಗೊAಡಿದೆ ಎಂದು ಅವರು ಹೇಳಿದರು.
     ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ  ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ ಅವರು ಮಾತನಾಡಿ ಕನ್ನಡಿಗರ ಹಕ್ಕು ಸವಲತ್ತುಗಳನ್ನು ಪಡೆಯಲು ಈಗ ನಡೆಯುತ್ತಿರುವ ಹೋರಾಟದ ಜತೆಯಲ್ಲಿ ನ್ಯಾಯಾಲಯದಲ್ಲೂ ಹೋರಾಟ ನಡೆಸಬೇಕಾಗಿದೆ. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಯಕ್ಷಗಾನ, ಪತ್ರಿಕೆಗಳು ಸಾಕಷ್ಟು ಕೊಡುಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೋದ್ಯಮವನ್ನು ಬೆಳೆಸುವ ಮೂಲಕ ಕನ್ನಡಿಗರಲ್ಲಿ ಭಾಷಾ ಪ್ರೇಮ, ಅಭಿಮಾನ ಮೂಡಿಸಬೇಕು. ಮನೆ ಮನೆಯಲ್ಲೂ ಕನ್ನಡ ಪುಸ್ತಕಗಳ ಸಂಗ್ರಹವಿರಬೇಕು. ಮೊಬೈಲನ್ನು ಕನ್ನಡ ಪೂರಕವಾಗಿ ಬೆಳೆಸಿಕೊಳ್ಳಬೇಕೆಂದರು.
    ಭಾ.ಜ.ಪ. ಮಂಗಳೂರು ದಕ್ಷಿಣ ಕ್ಷೇತ್ರ ಸ್ಲಂ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್‌ಬೈಲ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದರು. ಸಾಹಿತಿ ಅಕ್ಷತಾರಾಜ್ ಪೆರ್ಲ ರಾಜ್ಯೋತ್ಸವ ಉಪನ್ಯಾಸ ನೀಡಿ ಕಾಸರಗೋಡಿನಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ತೆರೆಯಬೇಕು. ಕನ್ನಡ ತನ ಜಾಗೃತಿಗೊಳಿಸುವ ಕೆಲಸವಾಗಬೇಕೆಂದರು. ಕನ್ನಡ ಭಾಷೆಗೆ ಅದರದ್ದೇ ಆದ ಸೌಂದರ್ಯವಿದೆ, ಘನತೆ, ಗೌರವವಿದೆ. ಈ ಹಿನ್ನೆಲೆಯಲ್ಲಿ ಭಾಷಾ ಸ್ವಾತಂತ್ರ‍್ಯ ನೀಡಿ ಎಂದು ಅವರು ಇದೇ ವೇಳೆ ಹೇಳಿದರು.
     ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ, ಉದ್ಯಮಿ ರಾಮ್ ಪ್ರಸಾದ್, ನಿರ್ದೇಶಕ ರಾಧಾಕೃಷ್ಣ ಕೆ.ಉಳಿಯತ್ತಡ್ಕ  ಶುಭಹಾರೈಸಿದರು. ಶಿವರಾಮ ಕಾಸರಗೋಡು, ಪುರುಷೋತ್ತಮ ನಾÊಕ್, ಮುರಳಿ ಪಾರೆಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
     ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ನುಡಿದು ಸ್ವಾಗತಿಸಿ, ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ವಂದಿಸಿದರು. ಕಾವ್ಯ ಕುಶಲ ಕಾರ್ಯಕ್ರಮ ನಿರೂಪಿಸಿದರು.
      ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಲಾವಿದರಾದ ದಿವಾಕರ ಅಶೋಕ್‌ನಗರ, ಸ್ಮಿತಾ ಉದಯಪ್ರಕಾಶ್, ಯಜ್ಞೇಶ್ ಆಚಾರ್ಯ ಬಾಯಾರು, ಉದಯ ಕಾರ್ಲೆ, ಸ್ವರ್ಣಲತಾ ಬಾಯಾರು, ಸುಜಿತ್ ಬೇಕೂರು ಅವರಿಂದ ನಾಡಗೀತೆ ಗಾಯನ ಮತ್ತು ಪುಟಾಣಿಗಳಿಂದ ನೃತ್ಯ ವೈವಿ`À್ಯ ಜರಗಿತು. ಸತ್ಯನಾರಾಯಣ ಐಲ, ಜಗದೀಶ ಉಪ್ಪಳ ಹಿಮ್ಮೇಳದಲ್ಲಿ ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries