HEALTH TIPS

ಅಯೋಧ್ಯೆ ತೀರ್ಪು:ಪಳ್ಳಂ ಅಂಗನವಾಡಿ ಆವರಣ ಗೋಡೆಯಲ್ಲಿ ಬ್ಯಾನರ್ ಪ್ರತ್ಯಕ್ಷ

       
        ಬದಿಯಡ್ಕ:ಕೇರಳದ ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸಮಾರಂಭ, ರಾಜಕೀಯ ಪಕ್ಷ, ಉದ್ಯಮಗಳ ಬ್ಯಾನರ್, ಪೆÇೀಸ್ಟರ್, ಪ್ಲೆಕ್ಸ್ ಬೋರ್ಡ್ ಹಾಕದಂತೆ ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿದ್ದರೂ ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ವಿವಾದಿತ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿರುವಂತೆ ಸಾರ್ವಜನಿಕ ಸ್ಥಳಗಳಲ್ಲಿ  ವ್ಯಾಪಕವಾಗಿ ಪೆÇೀಸ್ಟರ್‍ಗಳು ಪ್ರತ್ಯಕ್ಷಗೊಳ್ಳುತ್ತಿವೆ.
     ಮುಂಡಿತ್ತಡ್ಕ ಪಳ್ಳಂ ಅಂಗನವಾಡಿಯ ಆವರಣ ಗೋಡೆಯಲ್ಲಿ ಪೆÇೀಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೆಸರಿನಲ್ಲಿ ಬ್ಯಾನರ್ ಪ್ರತ್ಯಕ್ಷ ಗೊಂಡಿದ್ದು 'ಬಾಬರಿ ವಿಧಿ ನೀತಿ ನಿಷೇಧಂ-ನೀತಿಕ್ಕು ವೇಂಡಿ ಶಬ್ಧಿಕ್ಕುಗ'(ಬಾಬರಿ ತೀರ್ಪು ನ್ಯಾಯ ನಿಷೇಧ-ನ್ಯಾಯಕ್ಕಾಗಿ ಧ್ವನಿಯೆತ್ತಿ), ಹಾಗೂ ಭಾರತೀಯ ಇಮಾಂ ಕೌನ್ಸಿಲ್ ಸಂಘಟನೆ ಹೆಸರಿನಲ್ಲಿ 'ದೈವಮೊನ್ನ್, ಮನುಷ್ಯರೊನ್ನ್' ಪ್ರಿಯಪ್ಪಟ್ಟ ನೆಬಿ (ದೇವನೊಬ್ಬ, ಮನುಷ್ಯರೊಂದೇ ಪ್ರೀತಿಯ ನೆಬಿ) ಕಾಂಪೈನ್ 2019 ನವಂಬರ್ 11 ಡಿಸೆಂಬರ್ 30 ಎಂಬಿತ್ಯಾದಿ ತಲೆ ಬರಹದ ಪೆÇೀಸ್ಟರ್ ಪ್ರತ್ಯಕ್ಷಗೊಂಡಿದೆ.
     ಸಂಘಟನೆ ಅಥವಾ ವ್ಯಕ್ತಿಗಳು ಬ್ಯಾನರ್ ಹಾಕಿದಾಗ ಅದೇ ಸ್ಥಳದಲ್ಲಿ ಬೇರೆ ಸಂಘಟನೆಯವರು ಸ್ಪರ್ಧೆಗೆ ಇಳಿದಲ್ಲಿ ಸಂಘರ್ಷ ಕೋಮು ಗಲಭೆಗೆ ಕಾರಣವಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತ ಪಡಿಸಿದ್ದಾರೆ.
     ಉತ್ಸವ ಅಥವಾ ರಾಜಕೀಯ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಎರಡು ದಿನಗಳ ಮೊದಲು ಪೆÇಲೀಸರ
ಅನುಮತಿ ಪಡೆಯ ಬೇಕಾಗಿದೆ. ಕಾರ್ಯಕ್ರಮದ ಬಳಿಕ ಆಯಾ ಸಂಘಟನೆಗಳನ್ನು ಅದನ್ನು ತೆರವುಗೊಳಿಸಬೇಕು.ತಪ್ಪಿದ್ದಲ್ಲಿಪೆÇಲೀಸರು ತೆರವುಗೊಳಿಸುವ ಕ್ರಮ ಕೈಗೊಳ್ಳಬೇಕು. ಪಳ್ಳಂ ಅಂಗನವಾಡಿ ಆವರಣ ಗೋಡೆಯಲ್ಲಿ ರಾತ್ರಿ ಬೆಳಗಾಗುವುದರ ಒಳಗೆ ಪೆÇೀಸ್ಟರ್ ಪ್ರತ್ಯಕ್ಷಗೊಂಡಿದ್ದು ಇದನ್ನು ಹಾಕಲು ಪೆÇಲೀಸರು ಅನುಮತಿ ನೀಡಿದ್ದಾರೆಯೇ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಪೆÇಲೀಸರು ಪೆÇೀಸ್ಟರ್ ತೆರವುಗೊಳಿಸಿ ಸಂಘರ್ಷ ಸಾಧ್ಯತೆ ತಪ್ಪಿಸಲು ಮುಂದಾಗಬೇಕಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries