ಕಾಸರಗೋಡು: ಬೇಕಲ ಟ್ಯೂರಿಸ್ಟ್ ಡೆಸ್ಟಿನೇಷನ್ ಪ್ರದೇಶದ ಜವಾಬ್ದಾರಿಯುತ ಉದ್ದಿಮೆಗಳ ಕುರಿತು ಅಧ್ಯಯನ ನಡೆಸಲು ಪೆರಿಯ ಕೇಂದ್ರೀಯ ವಿವಿಯ ಡಿಪಾರ್ಟ್ ಮೆಂಟ್ ಆಫ್ ಟ್ಯೂರಿಸಂ ಸ್ಟಡೀಸ್ ನ ಎಂ.ಬಿ.ಎ. ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಜವಾಬ್ದಾರಿಯುತ ಟ್ಯೂರಿಸಂ ಪ್ರದೇಶಗಳಿಗೆ ಸಂದರ್ಶನ ನಡೆಸಿದರು. ಸ್ಥಳೀಯ ಪ್ರವಾಸೋದ್ಯಮದಿಂದ ಆದಾಯ ಪಡೆಯಬಹುದಾದ ಮಡಲು ಹೆಣೆಯುವಿಕೆ, ಮಣ್ಣಿನ ಪತ್ರೆ ನಿರ್ಮಾಣ, ಶೇಂದಿ ಪಡೆಯುವಿಕೆ, ಭತ್ತ ಕುಟ್ಟುವಿಕೆ ಇತ್ಯಾದಿಗಳನ್ನು ಅವರು ನೇರವಾಗಿ ಕಂಡು ಮನನಮಾಡಿಕೊಂಡರು. ಶಿಕ್ಷಕರೂ, ವಿದ್ಯಾರ್ಥಿಗಳೂ ಸೇರಿ ಒಟ್ಟು ೫೦ ಮಂದಿ ಇದ್ದರು. ಪನೆಯಾಲ ಗ್ರಾಮದ ವೆಳುತ್ತೋಳಿ, ಕುನ್ನುಚ್ಚಿ ಪ್ರದೇಶಗಳ ಪ್ರವಾಸೋದ್ಯಮ ಉದ್ದಿಮೆದಾರರ ಮನೆಗಳಲ್ಲಿ ತಯಾರಿಸಿದ ಗ್ರಾಮೀಣ ಭೋಜನವನ್ನೂ ಅವರ ಸವಿದರು. ಟ್ಯೂರಿಸಂ ಮಿಷನ್ ಬೇಕಲ ಡೆಸ್ಟಿನೇಷನ್ ಸಂಚಾಲಕಿ ಟಿ.ಧನ್ಯಾ, ಕೇಂದ್ರೀಯ ವಿವಿಯ ಪ್ರವಾಸೋದ್ಯಮ ವಿಭಾಗ ಮುಖ್ಯಸ್ಥ ಡಾ.ಸಿಬಿ ಜಾರ್ಜ್, ಶಿಕ್ಷಕರಾದ ಮಹಮ್ಮದ್ ಅಶ್ರಫ್, ನಾಗರಾಜ ಶರ್ಮ ನೇತೃತ್ವ ವಹಿಸಿದ್ದರು.
ಜವಾಬ್ದಾರಿಯುತ ಪ್ರವಾಸೋದ್ಯಮ ಅಧ್ಯಯನಕ್ಕೆ ಆಗಮಿಸಿದ ವಿದ್ಯಾರ್ಥಿಗಳು
0
ನವೆಂಬರ್ 06, 2019