HEALTH TIPS

ಜಿಲ್ಲೆಯಲ್ಲಿ ಆಹಾರ ಸುರಕ್ಷೆ ಖಚಿತಪಡಿಸಬೇಕು: ಸಮಿತಿ ಸಭೆ


       
           ಕಾಸರಗೋಡು: ಶಾಲೆಗಳಲ್ಲಿ ಮಧ್ಯಾಹ್ನದ ಭೋಜನಕ್ಕಾಗಿ ವಿತರಣೆ ನಡೆಸಲು ಅಕ್ಕಿ ಸಹಿತ ಧವಸ ಧಾನ್ಯಗಳಿಗೆ ಸೂಕ್ತ ರೀತಿಯ ಸಪ್ಲೈ ಕೋ ದಾಖಲಾತಿ ಇರಿಸಿಕೊಳ್ಳಬೇಕು. ಮಕ್ಕಳಿಗೆ ಯಾವುದೇ ರೀತಿಯ ಆಹಾರದಲ್ಲಿ ವಿಷಾಂಶ  ಬಾಧೆ ಸಂಭವಿಸಿದಲ್ಲಿ ಸಪ್ಲೈ ಕೋ ಸಿಬ್ಬಂದಿ ವಿರುದ್ಧ ಭಾರತೀಯ ದಂಡ ಸಂಹಿತೆ 302,304 ಪ್ರಕಾರ ಕೇಸು ದಾಖಲಿಸಲಾಗುವುದು ಎಂದು ಜಿಲ್ಲಾ ಆಹಾರ ಸುರಕ್ಷೆ ಸಮಿತಿ ಸಭೆ ತಿಳಿಸಿದೆ.
      ಜಿಲ್ಲಾಧಿಕಾರಿ ಅವರ ಛೇಂಬರ್ ನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ದಾಸ್ತಾನುಗೃಹದಲ್ಲಿ ಚೆಲ್ಲುವ ಅಕ್ಕಿಯನ್ನು ಸಮಪರ್ಕವಾಗಿ ಸಂಗ್ರಹಿಸಲಾದರೂ, ಶಾಲೆಗಳಿಗೆ ಇದನ್ನು ವಿತರಿಸಬಾರದು ಎಂದು ಸಭೆ ಆದೇಶಿಸಿದೆ.
ದಾಸ್ತಾನುಗೃಹದಿಂದ ಸೂಕ್ತ ಪ್ರಮಾಣದ ಸಾಮಾಗ್ರಿಗಳು ಪಡಿತರ ಅಂಗಡಿಗಳಿಗೆ ರವಾನೆಗೊಳ್ಳುತ್ತಿವೆಯೇ ಎಂಬ ಬಗ್ಗೆ ತಪಾಸಣೆ ನಡೆಸಲು ಜಿ.ಪಿ.ಎಸ್.ಸೌಲಭ್ಯ ಬಳಸಬೇಕು ಎಂದು ಸಭೆ ಆಗ್ರಹಿಸಿದೆ.
    ಎಫ್.ಸಿ.ಎ.ದಾಸ್ತಾನುಗೃಹದಿಂದ ಹೇರಿಕೆ ವ್ಯವಸ್ಥೆ ಸೂಕ್ತ ರೀತಿ ನಡೆಸಲು ಕನ್ವೇರ್ ಸ್ಥಾಪಿಸಬೇಕು ಎಂದು ಎಫ್.ಸಿ.ಎ.ಗೆ ಆದೇಶ ನೀಡಲು ತೀರ್ಮಾನಿಸಲಾಗಿದೆ. ಗ್ರಾಮಪಂಚಾಯತ್-ನಗರಸಭೆ ವ್ಯಾಪ್ತಿಯಲ್ಲಿ ಬರುವ ಆಹಾರ ತಯಾರಿಸುವ ಮತ್ತು ಮಾರಾಟ ನಡೆಸುವ ಎಲ್ಲ ಸಂಸ್ಥೆಗಳು ಆಹಾರ ಸುರಕ್ಷಾ ನಿಬಂಧನೆಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸಬೇಕು. ನೋಂದಣಿ/ ಪರವಾನಗಿ ಪಡೆಯಬೇಕು ಎಂದೂ ಸಭೆ ಆದೇಶಿಸಿದೆ. ಜಿಲ್ಲೆಯ ಎಲ್ಲ ಮಂಝುಗಡ್ಡೆ ಕಾರ್ಖಾನೆಗಳನ್ನು ನ.21ರಂದು  ವಿವಿಧ ಇಲಾಖೆಗಳು ಜತೆಸೇರಿ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲೆಯ ಆರಾಧನಾಲಯಗಳ ಪ್ರಸಾದ-ಭೋಜನ ವಿತರಣೆ ಸಂಬಂಧ ನೋಂದಣಿ ನಡೆಸುವ ಬಗ್ಗೆ ಆಯಾ ಆರಾಧನಾಲಯಗಳ ಸಮಿತಿ ಪದಾಧಿಕಾರಿಗಳು ಗಮನಹರಿಸಬೇಕು. ಎಲ್ಲ ಆಹಾರ ಮಾರಾಟ ಕೇಂದ್ರಗಳಲ್ಲಿ, ಗ್ರಾಹಕರು ದೂರು ನೀಡುವುದಿದ್ದಲ್ಲಿ ಟಾಲ್ ಫ್ರೀ ನಂಬ್ರ 1800-425-1125 ನ್ನು ಪ್ರದರ್ಶಿಸಬೇಕು. ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಆಹಾರ ಸರಕ್ಷೆ ಖಚಿತಪಡಿಸುವ ಹೊಣೆಯನ್ನು ಆಹಾರ ಸುರಕ್ಷೆ ಇಲಾಖೆಗೆ ವಹಿಸಿರುವುದಾಗಿ ಜಿಲ್ಲಾಧಿಕಾರಿ ಆದೇಶಿಸಿದರು.
    ಸಭೆಯಲ್ಲಿ ಸಹಾಯಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ಪ್ರಷೋಬ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಷಾಂಟಿ ಕೆ.ಕೆ., ಜಿಲ್ಲಾನಾಗರೀಕ ಪೂರೈಕೆ ಅಧಿಕಾರಿ ಎಂ.ಝುಲ್ಫೀಕರ್, ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಕಚೇರಿಯ ಹಿರಿಯ ವರಿಷ್ಠಾಧಿಕಾರಿ ಉಷಾಕುಮಾರಿ, ಫುಡ್ ಅನಾಲಿಸಿಸ್ಟ್ ಕೋಯಿಕೋಡ್, ಆಹಾರ ಸುರಕ್ಷೆ ಸಹಾಯಕ ಕಮೀಷನರ್ ಉದಯಶಂಕರ್ ಪಿ.ಯು, ಆಹಾರ ಸುರಕ್ಷೆ ಅಧಿಕಾರಿ ಹೇಮಾಂಬಿಕಾ, ಜಿಲ್ಲಾ ಆಸ್ಪತ್ರೆ ಡಯಟೀಷಿಯನ್ ಶ್ರೀಲಕ್ಷ್ಮಿ ಪಿ., ಅಸಹರ್ ಎಂ. ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries