ಪೆರ್ಲ:ಪೆರ್ಲದ ಯಕ್ಷಮಿತ್ರರು ಪಡ್ರೆ ಶನಿವಾರ ರಾತ್ರಿ ಪೆರ್ಲ ಶ್ರೀ ಭಾರತೀ ಸದನದಲ್ಲಿ ಆಯೋಜಿಸಿದ 'ಪಡ್ರೆ ಯಕ್ಷೋತ್ಸವ ೨೦೧೯' ೧೪ನೇ ವರ್ಷದ ಸನ್ಮಾನ ಸಮಾರಂಭದ ಅಂಗವಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆ ಹಾಗೂ ಗಾನ- ಮಾಧುರ್ಯ ಝೇಂಕಾರಗಳ ಸಮ್ಮಿಲನದ ಹಿಮ್ಮೇಳ, ವಾಕ್-ನೃತ್ಯ-ಗಿರ್ಕಿಗಳ ಮುಮ್ಮೇಳದೊಂದಿಗೆ 'ಸತ್ಯಹರೀಶ್ಚಂದ್ರ-ಧೀರ ದುಂದುಭಿ' ಯಕ್ಷಗಾನ ಬಯಲಾಟ ಪ್ರದರ್ಶನ ಜರುಗಿತು.
ಸತ್ಯ ಹರಿಶ್ಚಂದ್ರ ಪ್ರಸಂಗದ ಅವತರಣಿಕೆಯ ಸಂದರ್ಭ ಮಹಾರಾಜ ಹರಿಶ್ಚಂದ್ರನ ಕಷ್ಟಕೋಟಲೆಗಳ ಅಭಿನಯ ಹಿಮ್ಮೇಳದವರ ಸಹಿತ ಪ್ರೇಕ್ಷಕರು ಕಣ್ಣೀರುಗೆರೆದುದು ವಿಶೇಷವಾಗಿ ಗಮನಾರ್ಹವಾಗಿತ್ತು. ವೀರಬಾಹುವಾಗಿ ರಾಧಾಕೃಷ್ಣ ನಾವಡ ಮಧೂರು, ಹರಿಶ್ಚಂದ್ರನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಹಾಗೂ ಮಹೇಶ್ ಸಾಣೂರು ಚಂದ್ರಮತಿಯಾಗಿ ಮರೆಯದ ಅಭಿಯನ ನೀಡಿದ್ದರು. ಭಾಗವತರಾಗಿ ದಿನೇಶ್ ಅಮ್ಮಣ್ಣಾಯ ಪ್ರಸಂಗ ಮುನ್ನಡೆಸಿದ್ದರು.