HEALTH TIPS

ತುಳುನಾಡ ಬಾಲೆ ಬಂಗಾರ್-ಮುದ್ದು ಮಕ್ಕಳ ಭಾವಚಿತ್ರ ಸ್ಪರ್ಧೆ-ಬಹುಮಾನ ವಿತರಣೆ

     ಮಂಜೇಶ್ವರ:ತುಳುವೆರೆ ಆಯನೊ ಕೂಟದ ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ಸಮಿತಿ ಸತತ ಮೂರನೇ ವರ್ಷ ಆಯೋಜಿಸಿದ್ದ ಮುದ್ದು ಮಕ್ಕಳ ಭಾವಚಿತ್ರ ಸ್ಪರ್ಧಾ ಬಹುಮಾನ ವಿತರಣೆ ಕಾರ್ಯಕ್ರಮ ಬುಧವಾರ ಅಪರಾಹ್ನ ಹೊಸಂಗಡಿಯ ಗೇಟ್ ವೇ ಸಭಾಂಗಣದಲ್ಲಿ ನಡೆಯಿತು.
    ತುಳುನಾಡ ಬಾಲೆ ಬಂಗಾರ್ ಮಂಜೇಶ್ವರ ಸಮಿತಿ ಅಧ್ಯಕ್ಷ ಸಂಕಬೈಲು ಸತೀಶ ಅಡಪ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಸಮಿತಿಯ ಗೌರವಾಧ್ಯಕ್ಷ, ಉದ್ಯಾವರ ಮಾಡ ಅರಸು ಮಂಜಿಷ್ಣಾರು ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಡ ಮಾಡ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಶ್ರೀಮಂತ ಪರಂಪರೆಯ ತುಳುನಾಡ ಆಚರಣೆ, ನಂಬಿಕೆ, ಜೀವನ ಶೈಲಿ, ಆಹಾರ-ವಿಹಾರಗಳಂತಹ ಪರಂಪರೆಯನ್ನು ನೆನಪಿಸುವ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿ ನಡೆಯುತ್ತಿರಬೇಕು. ಈ ಕಾರಣಕ್ಕಾದರೂ ತುಳು ನಾಡಟಿನ ಜನತೆ ಒಗ್ಗಟ್ಟಿನಿಂದ ಪ್ರವರ್ತಿಸುವಲ್ಲಿ ಆಸಕ್ತರಾಗಬೇಕು ಎಂದು ತಿಳಿಸಿದರು. ಪುಟಾಣಿಗಳಿಗೆ ಏರ್ಪಡಿಸಲಾಗುವ ತೌಳವ ಪರಂಪರೆಯ ಪೋಟೋ ಸ್ಪರ್ಧೆ ಆ ಕಾರಣಕ್ಕಾದರೂ ಹೊಸ ತಲೆಮಾರಿಗೆ ಪರಂಪರೆ ಪರಿಚಯಿಸುವಲ್ಲಿ ಕೈದೀವಿಗೆಯಾಗಲಿ ಎಮದು ಹಾರೈಸಿದರು.
     ಸ್ಪರ್ಧೆಯಲ್ಲಿ ಭಾಗವಹಿಸಿದ್ದ 70 ಪುಟಾಣಿಗಳ ಭಾವಚಿತ್ರಗಳನ್ನು ವಿಶೇಷವಾಗಿ ಸಿದ್ದಪಡಿಸಲಾದ ಫಲಕವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಅನಾವರಣಗೊಳಿಸಿದರು. ವಿವಿಧ ಕ್ಷೇತ್ರಗಳ ಗಣ್ಯರಾದ ಜಯಾನಂದ ಕೆ.ಆರ್., ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಅಶ್ವಥ್ ಪೂಜಾರಿ ಲಾಲ್‍ಬಾಗ್, ರತಿಕ್ ಹೊಸಂಗಡಿ, ಕೆ.ನಾರಾಯಣ ನಾಯಕ್ ನಡುಹಿತ್ಲು ಕುಳೂರು, ಸಲಾಂ ವರ್ಕಾಡಿ, ಸಂಜೀವ ಶೆಟ್ಟಿ ಮಾಡ, ಬಾಬು ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿದ್ದ ಅಂತರಾಷ್ಟ್ರೀಯ ಚಿತ್ರ-ಶಿಲ್ಪ ಕಲಾವಿದ ಜೆ.ಪಿ.ಕೋಟೆಕ್ಕಾರ್, ಪುನೀತ್ ಶೆಟ್ಟಿ ಮಂಗಳೂರು ಹಾಗೂ ಡಾ. ಸ್ವಪ್ನ ಹೊಸಂಗಡಿ ಉಪಸ್ಥಿತರಿದ್ದು ಆಯ್ಕೆ ಪ್ರಕ್ರಿಯೆಯ ಬಗ್ಗೆ ಮಾತನಾಡಿ ಮುಂದಿನ ವರ್ಷ ಇನ್ನಷ್ಟು ಬಾಲ ಪ್ರತಿಭೆಗಳನ್ನು ಬೆಳಕಿಗೆ ತರುವ ಯತ್ನಗಳಾಗಬೇಕು ಎಂದರು.
     ಸ್ಪರ್ಧೆಯಲ್ಲಿ ಕಿನ್ನಿಗೋಳಿಯ ಬಾಲಕೃಷ್ಣ ಪೂಂಜ-ಗಾಯತ್ರಿ ಪೂಂಜ ದಂಪತಿಗಳ ಪುತ್ರ ರಿತ್ವಿ ಬಿ.ಶೆಟ್ಟಿ ಪ್ರಥಮ, ಕಾಂತಾವರದ ಪ್ರಮೋದ್ ಸಪ್ರೆ-ವಾಣಿ ಸಪ್ರೆ ದಂಪತಿಗಳ ಪುತ್ರ ಸಂಘೋಶ್ ಸಪ್ರೆ ಜಾಕಿಬೆಟ್ಟು ದ್ವಿತೀಯ ಹಾಗೂ ವರ್ಕಾಡಿ ಮೂರುಗೋಳಿಯ ವಸಂತಕುಮಾರ್-ಸೌಮ್ಯಶ್ರೀ ದಂಪತಿಗಳ ಪುತ್ರಿ ಶ್ರೀಯಾ ಸನತ್ ತೃತೀಯ ಬಹುಮಾನಗಳನ್ನು ಗಳಿಸಿದರು. ಜೊತೆಗೆ ಐವರಿಗೆ ಸಮಧಾನಕರ ಬಹುಮಾನಗಳನ್ನೂ, ಭಾಗವಹಿಸಿದವರಿಗೆ ನೆನಪಿನ ಸ್ಮರಣಿಕೆಗಳನ್ನು ವಿತರಿಸಲಾಯಿತು. ಜಯ ಮಣಿಯಂಪಾರೆ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ರತನ್ ಕುಮಾರ್ ಹೊಸಂಗಡಿ ವಂದಿಸಿದರು. ಸಭಾ ಕಾರ್ಯಕ್ರಮದ ಮೊದಲು ಮಂಜೇಶ್ವರದ ರಿದಂ ಕಲ್ಚರಲ್ ವಿಂಗ್ಸ್ ತಂಡ ಹಾಗೂ ಇಂಚರ ಮೆಲೊಡೀಸ್ ಕಡಂಬಾರ್ ಇವರಿಂದ ತುಳು ಸಂಗೀತ ರಸಮಂಜರಿ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries