ಕಾಸರಗೋಡು: ರಾಜ್ಯದ ಪ್ರಪ್ರಥಮ ಮಹಿಳಾ ಸಂಕೀರ್ಣ(ವುಮನ್ ಕಾಂಪ್ಲೆಕ್ಸ್) ನಗರದ ಅಣಂಗೂರಿನಲ್ಲಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ.
ಪತಿ ತೊರೆದು ಹೋದ, ಪುಟ್ಟ ಮಕ್ಕಳೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿರುವ ಹೆಣ್ಣುಮಕ್ಕಳಿಗಾಗಿ ಒಂದು ಬೆಡ್ ರೂಂ ಸಹಿತದ ಹತ್ತು ಫ್ಲಾಟ್ಗಳು, ದೌರ್ಜನ್ಯಕ್ಕೊಳಗಾದ ಮಹಿಳೆಗೆ ತಾತ್ಕಾಲಿಕ ಆಸರೆ ಕೇಂದ್ರವಾಗಿರುವ ಸಖಿ ವನ್ ಸ್ಟಾಪ್ ಸೆಂಟರ್, ದೂರದೂರಿಂದ ಸಂದರ್ಶನ, ಪರೀಕ್ಷೆ ಸಹಿತ ಅಗತ್ಯಗಳಿಗೆ ಆಗಮಿಸುವ ಜಿಲ್ಲೆಯ ಹೊರಭಾಗಗಳ ಮಹಿಳೆಯರಿಗೆ ಒಂದು ರಾತ್ರಿ ತಂಗಬಹುದಾದ ಇತ್ಯಾದಿ ವಿವಿಧ ಯೋಜನೆಗಳನ್ನು ಸೇರಿಸಿ ವುಮನ್ಕಾಂಪ್ಲೆಕ್ಸ್ ನಿರ್ಮಿಸಲಾಗುವುದು. ಯೋಜನೆಯ ರೂಪುರೇಷೆ ಸಿದ್ಧಪಡಿಸಿ, ನೋಂದಣಿ ಚಟುವಟಿಕೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.