ಕಾಸರಗೋಡು: ಜಿಲ್ಲೆಯಲ್ಲಿಎರಡುವರೆ ದಶಕಗಳ ನಂತರ ನಡೆಯುತ್ತಿರುವ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಪ್ರಚಾರ ಕಾರ್ಯದಲ್ಲಿ ಪುಟ್ಟಮಕ್ಕಳೂ ತಮ್ಮದೇ ಶೈಲಿಯಲ್ಲಿ ಕೊಡುಗೆ ನೀಡಲಿದ್ದಾರೆ. 60 ಮಕ್ಕಳ ತಂಡವೊಂದು ಶನಿವಾರ ಪಂಜಾರಿಮೇಳ(ಪಂಚವಾದ್ಯಗಳ ಮೇಳ) ಪರ್ಯಟನೆ ಮೂಲಕ ವಿವಿಧ ಕೇಂದ್ರಗಳಲ್ಲಿ ಕಲೋತ್ಸವದ ಪ್ರಚಾರ ನಡೆಸಿದರು.
ಕಲೋತ್ಸವದ ಪ್ರಚಾರ ಸಮಿತಿಯ ನೇತೃತ್ವದಲ್ಲಿ ಈ ಪರ್ಯಟನೆ ಆಯೋಜಿಸಲಾಗಿದೆ. ಉತ್ತಮ ತರಬೇತಿ ಪಡೆದಿರುವ ಮೇಲಾಂಗೋಟ್ ಎ.ಸಿ.ಕಣ್ಣನ್ ನಾಯರ್ ಸ್ಮಾರಕ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯ 60 ಮಂದಿ ಮಕ್ಕಳು ಕಾಞಂಗಾಡ್ ನಿಂದ ನೀಲೇಶ್ವರ ವರೆಗಿನ ವಿವಿಧಕೇಂದ್ರಗಳಲ್ಲಿ ಈ ವಾದನ ಪರ್ಯಟನೆ ನಡೆಯಿತು. ಇಕ್ಬಾಲ್ ಶಾಲೆ ಆವರಣದಿಂದ ಆರಂಭಗೊಂಡ ಪರ್ಯಟನೆ, ವೆಳ್ಳಿಕೋತ್. ಕಾಞಂಗಾಡ್ ಪೆಟ್ರೋಲ್ ಬಂಕ್, ಮಾಂತೋಪ್, ನೀಲೇಶ್ವರ ಎಂಬ ಕೇಂದ್ರಗಳಲ್ಲಿ ಚೆಂಡೆ ಸಹಿತ ವಾದನಗಳ ಮೇಳ ನಡೆಸಿ, ನೀಲೇಶ್ವರದ ಐಂಙÉೂೀತ್‍ನಲ್ಲಿ ಸಮಾರೋಪಗೊಂಡಿತು. ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಗಳಿಗೆ ಸ್ಪರ್ಧೆಗಳಲ್ಲಿ ಭಾಗವಸುವ ಅವಕಾಶ ಇಲ್ಲದೇ ಇದ್ದರೂ,ಈ ಮಹಾಕಲಾಸಂಗಮದ ಪ್ರಚಾರರಾರ್ಥ ಪರ್ಯಟನೆ ನಡೆಸುವ ಸೌಭಾಗ್ಯ ಇಲ್ಲಿನ ಮಕ್ಕಳಿಗೆ ಒದಗಿಬಂದಿತ್ತು. ಈ ತಂಡದಲ್ಲಿ 4ರಿಂದ 7 ನೇ ತರಗತಿ ವರೆಗಿನ ಮಕ್ಕಳು ಭಾಗವಹಿಸಿದ್ದರು. ಕೇರಳ ಕ್ಷೇತ್ರ ಕಲಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಮಡಿಕೈ ಉಣ್ಣಿಕೃಷ್ಣನ್ ಮಾರಾರ್, ಮಣಿಕಂಠನ್‍ಮಾರಾರ್ ಉಪ್ಪಿಲಿಕೈ,ಹರೀಶ್‍ಮಾರಾರ್ ಮಡಿಕೈ ಅವರ ನೇತೃತ್ವದಲ್ಲಿ ಕಳೆದ ಒಂದು ತಿಂಗಳಿಂದ ಇವರಿಗೆ ತರಬೇತಿ ನೀಡಲಾಗಿತ್ತು.