ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ದಾಖಲಾಗುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಶೇ ೯೦ ಪೋಕ್ಸೋ ಕಾಯಿದೆಗೆ ಸಂಬAಧಿಸಿದ ಪ್ರಕರಣಗಳಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ತಿಳಿಸಿದರು.
ಚಿನ್ಮಯಾ ವಿದ್ಯಾಲಯದಲ್ಲಿ ಗುರುವಾರ ನಡೆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮಕ್ಕಳ ಹಕ್ಕು ಸಂರಕ್ಷಣೆ ಕಾಯಿದೆಯ ಬಗ್ಗೆ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲೈಂಗಿಕ ಶೋಷಣೆಗೊಳಗಾಗುತ್ತಿರುವವರಲ್ಲಿ ಅಧಿಕ ಮಂದಿ ಗಂಡುಮಕ್ಕಳು. ಮಕ್ಕಳ ಮೇಲಿನ ದೌರ್ಜನ್ಯ ವಿರುದ್ಧ ವ್ಯಾಪಕ ಜಾಗೃತಿ ಮೂಡಿಸುವ ಕಾಯಕ ಸಮಾಜದಲ್ಲಿ ನಡೆಯಬೇಕು. ಆರೋಪಿಗಳನ್ನು ಸಮಾಜವೇ ಶಿಕ್ಷಿಸುವಂತಾಗಬೇಕು. ಪ್ರಜಾಜಾಗೃತಿಯಿಂದ ಮಾತ್ರ ಈ ಪಿಡುಗಿನ ನಿವಾರಣೆ ಸಾಧ್ಯ ಎಂದವರು ಆಗ್ರಹಿಸಿದರು.