ಬದಿಯಡ್ಕ: ಶೇಣಿಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿಯೂ ಗಮನಾರ್ಹ ಸಾಧನೆಯೊಂದಿಗೆ ಗುರುತಿಸಿಕೊಂಡಿರುವ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠವು ಒಟ್ಟು ೩೨೯ ಅಂಕಗಳನ್ನು ಗಳಿಸಿದೆ. ಪ್ರಾಥಮಿಕ (ಜನರಲ್) ೪೮, ಹಿರಿಯ ಪ್ರಾಥಮಿಕದಲ್ಲಿ ಸಂಸ್ಕೃತ ೬೬, ಜನರಲ್ ೫೬ ಹಾಗೂ ಪ್ರೌಢ ಸಂಸ್ಕೃತ ೬೫, ಜನರಲ್ ೯೪ ಅಂಕಗಳನ್ನು ಪಡೆದಿರುತ್ತದೆ. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ೯ ವಿದ್ಯಾರ್ಥಿಗಳು ಹಾಗೂ ಪ್ರೌಢ ವಿಭಾಗದಲ್ಲಿ ೧೪ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಹೆಗಲುಕೊಟ್ಟ ಅಧ್ಯಾಪಕ ವೃಂದ, ಪ್ರೋತ್ಸಾಹಿಸಿದ ಪಾಲಕರನ್ನು ಶಾಲಾ ಆಡಳಿತ ಮಂಡಳಿ, ರಕ್ಷಕ ಶಿಕ್ಷಕ ವೃಂದ ಅಭಿನಂದಿಸಿದೆ.