ಕಾಸರಗೋಡು: ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದ ಪ್ರೌಢಶಾಲಾ ವಿಭಾಗ ಯಕ್ಷಗಾನ ಸ್ಪರ್ಧೆಯಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ `ಬಬ್ರುವಾಹನ ಕಾಳಗ' ಯಕ್ಷಗಾನ ಎ ಶ್ರೇಣಿಯೊಂದಿಗೆ ಪ್ರಥಮ ಬಹುಮಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಬಬ್ರುವಾಹನನಾಗಿ ಮನೀಶ್ ಎಸ್. ಡಿ., ಅನುತಾಲ್ವನಾಗಿ ಶರಣ್ಯ, ಚಿತ್ರಾಂಗಧೆಯಾಗಿ ಶ್ರುತಿ ಎಸ್., ಕೃಷ್ಣನಾಗಿ ದೀಕ್ಷಿತಾ ಎಂ., ಧೂತನಾಗಿ ಧೃತಿ ಶೆಟ್ಟಿ, ಅರ್ಜುನನಾಗಿ ಕೃಪಾ, ಪ್ರದ್ಯುಮ್ನನಾಗಿ ಹೃತಿಕ ಪಾತ್ರಗಳಿಗೆ ಜೀವತುಂಬಿದರು. ಗುರುಗಳಾದ ಶೇಖರ ಮಾಸ್ತರ್ ಮಾರ್ಗದರ್ಶನ ನೀಡಿದ್ದು, ಭಾಗವತರಾಗಿ ಶೇಖರ ಮಾಸ್ತರ್, ಮದ್ದಳೆಯಲ್ಲಿ ಶಿವರಾಮ ಆಚಾರಿ, ಚೆಂಡೆಯಲ್ಲಿ ಶಂಕರ ಕಾಮತ್ ಸಹಕರಿಸಿದರು.
ಅಧ್ಯಾಪಕರಾದ ಪ್ರಶಾಂತ ಹೊಳ್ಳ ಎನ್, ಶಿವಪ್ರಸಾದ ಚೆರುಗೋಳಿ, ರಾಜಕುಮಾರ ಕೆ., ಪ್ರದೀಪ್ ಕರ್ವಾಜೆ, ಕೇಶವ ಪ್ರಸಾದ ಎ. ಸಹಕರಿಸಿದರು.