ಕುಂಬಳೆ: ವಿದ್ಯಾನಗರ ಚಾಲದಲ್ಲಿರುವ ಕಣ್ಣೂರು ವಿವಿಯ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ತುಳು ಡಿಪ್ಲೊಮಾ ವಿಚಾರ ಸಂಕಿರಣ ಇಂದು(ನ.16) ವಿವಿ ಕನ್ನಡ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 10 ರಿಂದ ಆರಂಭಗೊಳ್ಳುವ ಸಮಾರಂಭದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಪಣಿಯಾಡಿ ಪ್ರಶಸ್ತಿ ಪುರಸ್ಕøತೆ ಅಕ್ಷತಾ ರಾಜ್ ಪೆರ್ಲ ಅವರ ತುಳು ಕಾದಂಬರಿ ಬೊಳ್ಳಿ ಕೃತಿಯ ವಿಮರ್ಶೆ ನಡೆಸುವರು. ಕಣ್ಣೂರು ವಿವಿ ಕನ್ನಡ ವಿಭಾಗ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ, ಕೃತಿ ಕರ್ತೃ ಅಕ್ಷತಾ ರಾಜ್ ಪೆರ್ಲ ಮೊದಲಾದವರು ಉಪಸ್ಥಿತರಿರುವರು. ತುಳು ಡಿಪ್ಲೊಮಾ ವಿದ್ಯಾರ್ಥಿಗಳು ಸಹಕರಿಸುವರು.