ಮುಳ್ಳೇರಿಯ: ಶೇಣಿ ಶಾರದಾಂಬಾ ವಿದ್ಯಾಸಂಸ್ಥೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಹಿರಿಯ ಪ್ರಾಥಮಿಕ ವಿಭಾಗದ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಎಗ್ರೇಡಿನೊಂದಿಗೆ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ವಿದ್ಯಾರ್ಥಿನಿಯರಾದ ಹಿಮಾನಿ ಉದಯ್ ಆಚಾರ್ಯ, ಶ್ರದ್ಧಾ ಎಸ್.ಪಾರ್ವತಿ,ವಿಸ್ಮಯ,ತೇಜಸ್ವಿನಿ,ಮಾನಸ ಮುರಳಿ, ಅನುಶ್ರೀ,ಅಮೇಯ ನೃತ್ಯದಲ್ಲಿ ತಮ್ಮ ಚಾತುರ್ಯ ಪ್ರದರ್ಶಿಸಿದ್ದರು. ನಾಟ್ಯಾಂಜಲಿ ಬೋವಿಕ್ಕಾನದ ನೃತ್ಯ ಅಧ್ಯಾಪಕ ರಾಜೇಶ್ ಬೇವಿಂಜೆ ನಿರ್ದೇಶನ ನೀಡಿದ್ದರು. ಹಿರಿಯ ಪ್ರಾಥಮಿಕ ವಿಭಾಗದ ಭರತನಾಟ್ಯದಲ್ಲಿ ಇದೇ ಶಾಲೆಯ ಹಿಮಾನಿ ಎಗ್ರೇಡಿನೊಂದಿಗೆ ದ್ವಿತೀಯ, ಹೈಸ್ಕೂಲು ವಿಭಾಗದ ಜಾನಪದ ನೃತ್ಯದಲ್ಲಿ ಆರ್ಯ ರಾಧಾಕೃಷ್ಣ ಅಡೂರು ಪ್ರಥಮ ಎಗ್ರೇಡ್, ಹಿರಿಯ ಪ್ರಾಥಮಿಕ ವಿಭಾಗದ ಜಾನಪದ ನೃತ್ಯದಲ್ಲಿ ಶ್ರದ್ಧಾ ಎಸ್.ಪಾರ್ವತಿ ಎಗ್ರೇಡಿನೊಂದಿಗೆ ದ್ವಿತೀಯ ಬಹುಮಾನ ಗಳಿಸಿಕೊಂಡಿದ್ದಾರೆ. ಉಪಜಿಲ್ಲಾ ಶಾಲಾ ಕಲೋತ್ಸವದ ಸಮಗ್ರ ಸ್ಪರ್ಧೆಯಲ್ಲಿ ೪೧೯ ಅಂಕಗಳೊAದಿಗೆ ಅಡೂರು ಸರ್ಕಾರಿ ಶಾಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು ಸ್ಪರ್ಧಾ ವಿಜೇತರನ್ನು ಶಾಲಾ ಮುಖ್ಯೋಪಾಧ್ಯಾಯರಾದ ಹನೀಫ್ ಜಿ.ಮೂಸಾನ್ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಅಡೂರು ಅಭಿನಂದಿಸಿದ್ದಾರೆ.
ಹಿರಿಯ ಪ್ರಾಥಮಿಕ ಸಮೂಹ ನೃತ್ಯದಲ್ಲಿ ಅಡೂರು ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ
0
ನವೆಂಬರ್ 03, 2019