ಮಂಜೇಶ್ವರ: ಕೇರಳದ ಶಾಲೆಗಳಲ್ಲಿ ಕಲಿಯುತ್ತಿರುವ ಎಲ್ಲಾ ಮಕ್ಕಳ ವಿವರಗಳನ್ನು `ಸಂಪೂರ್ಣ'ಎಂಬ ವೆಬ್‍ಸೈಟ್ ಮೂಲಕ ದಾಖಲೀಕರಣ ಮಾಡುವ ನೂತನ ವ್ಯವಸ್ಥೆ ಜಾರಿಯಲ್ಲಿದೆ. ಈ ವ್ಯವಸ್ಥೆಯಲ್ಲಿ ತುಳು ಮಾತೃ ಭಾಷೆಯ ಮಕ್ಕಳಿಗೆ ಮಾತೃ ಭಾಷೆ ತುಳು ಎಂದು ಸೇರಿಸುವ ಅವಕಾಶ ಇರಲಿಲ್ಲ. ಇದರಿಂದ ತುಳು ಮಾತೃಭಾಷೆಯ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿಯೂ ಔದ್ಯೋಗಿಕ ರಂಗದಲ್ಲಿಯೂ ಹಲವಾರು ಅವಕಾಶಗಳು ನಷ್ಟವಾಗುವ ಭೀತಿಯಿತ್ತು. ಈ ತೊಂದರೆಯನ್ನು ಶಾಲಾ ಅಧ್ಯಾಪಕರು ತುಳು ಅಕಾಡೆಮಿಯ ಅಧ್ಯಕ್ಷರಿಗೆ ಮನವಿ ಮಾಡಿದ್ದರು. ಕೇರಳ ತುಳು ಅಕಾಡೆಮಿಯ ವತಿಯಿಂದ ಈ ಕುರಿತಾದ ಮನವಿಯನ್ನು ರಾಜ್ಯ ಸರ್ಕಾರಕ್ಕೂ, ಜಿಲ್ಲಾಧಿಕಾರಿಗಳಿಗೂ, ರಾಜ್ಯದ ಹಾಗೂ ಜಿಲ್ಲಾ ಅಧಿಕಾರಿಗಳಿಗೂ ಸಲ್ಲಿಸಲಾಗಿತ್ತು.
ತುಳು ಮಾತೃ ಭಾಷೆ `ಸಂಪೂರ್ಣ'ದಲ್ಲಿ ಸೇರಿಸಲು ಅವಕಾಶ
0
ನವೆಂಬರ್ 26, 2019