ಪೆರ್ಲ:ಕಾಟುಕುಕ್ಕೆ ಕೆಂಗಣಾಜೆ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳ ವಿವಿಧ ಸ್ಪರ್ಧೆಗಳು ನಡೆದವು. ಕಾರ್ತಿಕೇಯ ಫ್ರೆಂಡ್ಸ್ ಕ್ಲಬ್ ಖಂಡೇರಿ ವತಿಯಿಂದ ಕ್ಲಬ್ ಅಧ್ಯಕ್ಷ ಸುರೇಶ್ ರೈ ಪೂಕರೆ ಭಾಗವಹಿಸಿದ ಎಲ್ಲರಿಗೂ ಬಹುಮಾನ ವಿತರಿಸಿದರು. ಗ್ರಾ.ಪಂ. ಸದಸ್ಯೆ ಮಲ್ಲಿಕಾ ಜೆ.ರೈ., ಶಿಕ್ಷಕಿ ಲೀಲಾ, ಸಹಾಯಕಿ ಶ್ಯಾಮಲಾ ಉಪಸ್ಥಿತರಿದ್ದರು.