ಬದಿಯಡ್ಕ: ಬೇಳ ಸಂತ ಬಾರ್ತಲೋಮೆಯ ಹಿರಿಯ ಬುನಾದಿ ಶಾಲೆಯ ವಿದ್ಯಾರ್ಥಿಗಳು ಕುಂಬಳೆ ಉಪಜಿಲ್ಲಾ ಮಟ್ಟದ ವಿವಿಧ ಮೇಳ ಹಾಗೂ ಕಲೋತ್ಸವಗಳಲ್ಲಿ ಉತ್ತಮ ಸಾಧನೆ ಗೈದು ಪ್ರಶಸ್ತಿಗಳನ್ನು ಬಾಚಿದೆ. ಇದರ ಪ್ರಯುಕ್ತ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದಿಸುವ ಕಾರ್ಯಕ್ರಮ ಇತ್ತೀಚೆಗೆ ಶಾಲೆಯಲ್ಲಿ ನೆರವೇರಿತು.
ಶಾಲಾ ಸಂಚಾಲಕಿ ಸಿ. ರ‍್ಮಿನ್ ಪಿರೇರಾರವರು ಪ್ರಶಸ್ತಿ ಪತ್ರಗಳನ್ನು ಹಂಚಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿ. ನಿವೇದಿತಾ ಮಾತನಾಡಿ ಮುಂದೆಯೂ ವಿದ್ಯಾರ್ಥಿಗಳು ಇಂತಹ ಸಾಧನೆಗಳನ್ನು ಮಾಡುವಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತಾಗಲಿ.ಶ್ರದ್ದೆ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಕಾಣಲು ಸಾಧ್ಯ ಎಂದು ಹಾರೈಸಿದರು. ಶಿಕ್ಷಕಿ ಬನಶಂಕರಿ ಕಾರ್ಯಕ್ರಮ ನಿರೂಪಿಸಿದರು.