ಬದಿಯಡ್ಕ : ನಾರಾಯಣಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಶ್ವೇತ ವಸ್ತ್ರಧಾರಿಗಳಾಗಿ ಶಾಲೆಗೆ ಆಗಮಿಸಿದ ಮಕ್ಕಳಿಗೆ ಚಾಚಾ ನೆಹರೂ ಟೋಪಿಯನ್ನು ನೀಡಲಾಯಿತು. ಇದೇ ವೇಳೆ `ವಿದ್ಯಾಲಯ ಪ್ರತಿಭೆಗಳೊಂದಿಗೆ' ಎಂಬ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಈ ತಿಂಗಳ 14ರಿಂದ 26ರ ವರೆಗೆ ನಡೆಯುವ ಕಾರ್ಯಕ್ರಮಕ್ಕೆ ನಾಂದಿ ಹಾಡಲಾಯಿತು. ವಿದ್ಯಾರ್ಥಿಗಳು ಊರಿನ ಪ್ರಸಿದ್ಧ ನಾಟಿ ವೈದ್ಯರಾದ ವಿಶ್ವನಾಥ ಕಬೆಕ್ಕೋಡು ಅವರ ಮನೆಯನ್ನು ಸಂದರ್ಶಿಸಿ ಅವರೊಂದಿಗೆ ಸಂವಾದವನ್ನು ನಡೆಸಿದರು. ನವಪ್ರತಿಭೆಗಳನ್ನು ಹುರಿದುಂಬಿಸುವ ಮತ್ತು ಸೃಜನಾತ್ಮಕತೆಯನ್ನು ಮಕ್ಕಳಲ್ಲಿ ಬೆಳೆಸುವ ಈ ಕಾರ್ಯಕ್ರಮಕ್ಕೆ ಊರಿನ 5 ಮಂದಿ ಪ್ರತಿಭೆಗಳನ್ನು ಆರಿಸಲಾಗಿದೆ.
ನಾರಾಯಣಮಂಗಲ ಶಾಲೆಯಲ್ಲಿ ಮಕ್ಕಳ ದಿನಾಚರಣೆ
0
ನವೆಂಬರ್ 16, 2019