ಪೆರ್ಲ: ಕಲಾ ನೈಪುಣ್ಯತೆಯ ಸಾಕ್ಷಾತ್ಕಾರಕ್ಕೆ ಹಪಹಪಿಸುವ ಕಲಾವಿದ ತನ್ನ ವೈಯುಕ್ತಿಕ ಆರೋಗ್ಯ ನಿರ್ವಹಣೆಯಂತಹ ಸಂಕೀರ್ಣ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸದಿರುವುದು ಕಳವಳಕಾರಿಯಾದುದು. ಆಧುನಿಕ ವೇಗದ ಜಗತ್ತಿನಲ್ಲಿ ಬೇಡಿಕೆಗಳು ಹೆಚ್ಚಾದಂತೆ ದಣಿವರಿಯದೆ ದುಡಿಯುವ ಕಲಾವಿದರು ಆರೋಗ್ಯ ನಿರ್ವಹಣೆಯ ನಿಟ್ಟಿನಲ್ಲಿ ಜವಾಬ್ದಾರಿಯುತ ಹೆಜ್ಜೆಗಳನ್ನು ಇರಿಸದಿದ್ದಲ್ಲಿ ಭಾರೀ ಅಪಾಯಗಳು ಕಂಗೆಡಿಸಲಿದೆ ಎಂದು ಪ್ರಸಿದ್ದ ವೈದ್ಯ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಅವರು ತಿಳಿಸಿದರು.
ಯಕ್ಷಸ್ನೇಹಿ ಬಳಗ ಪೆರ್ಲ ಮತ್ತು ಶೇಣಿ ರಂಗಜAಗಮ ಟ್ರಸ್ಟ್ ಕಾಸರಗೋಡು ಇದರ ನೇತೃತ್ವದಲ್ಲಿ ಕುಂಟಾರಿನ ಅಸ್ತಿತ್ವಂ ಪ್ರತಿಷ್ಠಾನದ ಸಹಯೋಗದಲ್ಲಿ ಸುಳ್ಯದ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ-ಆಸ್ಪತ್ರೆಯ ಸಹಕಾರದೊಂದಿಗೆ ಕಲಾವಿದರುಗಳಿಗಾಗಿ ಗಡಿನಾಡಲ್ಲೇ ಮೊತ್ತಮೊದಲ ಬಾರಿಗೆ ಭಾನುವಾರ ಪೆರ್ಲದ ಸತ್ಯನಾರಾಯಣ ಫ್ರೌಢಶಾಲೆಯಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಸಲಹಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನ ಕಲಾವಿದರುಗಳಲ್ಲಿ ಇತ್ತೀಚೆಗೆ ಹೃದಯ ಸಂಬAಧಿಗಳು ಹೆಚ್ಚು ಕಂಡುಬರುತ್ತಿದೆ. ಈ ಹಿನ್ನೆಕಾಲಾಕಾಲಕ್ಕೆ ಕಲಾವಿದರು ಆರೋಗ್ಯ ತಪಾಸಣೆ, ಚಿಕಿತ್ಸೆಗಳಿಗೆ ಆಸಕ್ತರಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಯಕ್ಷಸ್ನೇಹೀ ಬಳಗ, ಶೇಣಿ ರಂಗಜAಗಮ ಟ್ರಸ್ಟ್ ಮತ್ತು ಅಸ್ತಿತ್ವಂ ಪ್ರತಿಷ್ಠಾನದ ಕಾರ್ಯಯೋಜನೆ ಶ್ಲಾಘನೀಯ ಎಂದು ತಿಳಿಸಿದರು.
ಸಾಮಾಜಿಕ ಮುಖಂಡ ಅರವಿಂದ ಕುಮಾರ್ ಎನ್.ಕೆ.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಸ್ತಿತ್ವಂ ಪ್ರತಿಷ್ಠಾನದ ಪ್ರಕಾಶ ದೈಲಾಟ ಬೆಂಗಳೂರು ಶುಭಾಶಂಸನೆಗೈಯ್ದರು. ಸುಳ್ಯ ಕೆವಿಜಿ ವೈದ್ಯಕೀಯ ವಿದ್ಯಾಲಯ-ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಂಗನಾಥ್ ಹಾಗೂ ಡಾ.ಜೆಸೀಲಾ ಅವರು ಆರೋಗ್ಯ ನಿರ್ವಹಣೆ, ತಪಾಸಣೆ ಮತ್ತು ಕೆವಿಜಿ ವೈದ್ಯಕೀಯ ಸಂಸ್ಥೆಗಳಿAದ ಲಭ್ಯವಾಗುವ ನೆರವುಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಯಕ್ಷಗಾನ ಭಾಗವತ, ಯಕ್ಷಸ್ನೇಹೀ ಬಳಗದ ಸಂಚಾಲಕ ಸತೀಶ ಪುಣಿಚಿತ್ತಾಯ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು. ಶೇಣಿ ರಂಗಜAಗಮ ಟ್ರಸ್ಟ್ನ ವೀ.ಜಿ.ಕಾಸರಗೋಡು ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ವಿವಿಧ ರಂಗಗಳ ಕಲಾವಿದರಿಗೆ, ಸಾರ್ವಜನಿಕರಿಗೆ ತಜ್ಞ ವೈದ್ಯರಿಂದ ವಿವಿಧ ಆರೋಗ್ಯ ತಪಾಸಣೆಗಳು ನಡೆಯಿತು. ಶಿಬಿರದಲ್ಲಿ ಜನರಲ್ ಮೆಡಿಸಿನ್, ಶಸ್ತಿçಚಿಕಿತ್ಸಾ ವಿಭಾಗ, ಮಕ್ಕಳ ರೋಗಗಳ ವಿಭಾಗ, ನೇತ್ರ ಚಿಕಿತ್ಸೆ, ಚರ್ಮ ಹಾಗೂ ಲೈಂಗಿಕ ರೋಗ, ಸ್ತಿçà ರೋಗ, ಮೂಳೆ ವಿಭಾಗ, ರಕ್ತಗುಂಪು ವಿಭಾಗ ಹಾಗೂ ದಂತ ಚಿಕಿತ್ಸಾ ವಿಭಾಗದ ತಜ್ಞರು ಭಾಗವಹಿಸಿದರು.
ದಾಖಲೆಯಾದ ಶಿಬಿರ:
ಯಕ್ಷಗಾನ ಕಲಾವಿದರನ್ನೇ ಕೇಂದ್ರವಾಗಿಸಿ ಇದೇ ಮೊತ್ತಮೊದಲ ಬಾರಿಗೆ ಈ ಉಚಿತ ಆರೋಗ್ಯ ತಪಾಸಣೆ, ಮಾಹಿತಿ ಶಿಬಿರ ಏರ್ಪಡಿಸಲಾಗಿದ್ದು, ೯೦ಕ್ಕಿಂತಲೂ ಮಿಕ್ಕಿದ ಜನರು ಪ್ರಯೋಜನ ಪಡೆದುಕೊಂಡರು. ಈ ಪೈಕಿ ಶೇ.೪೦ ರಷ್ಟು ಮಾತ್ರ ಯಕ್ಷಗಾನ ಕಲಾವಿದರು ಶಿಬಿರದಲ್ಲಿ ತಪಾಸಣೆಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಯಕ್ಷಗಾನ ಕಲಾವಿದರು ಈಗಲೂ ಆರೋಗ್ಯ ನಿರ್ವಹಣೆ ನಿಟ್ಟಿನಲ್ಲಿ ತೋರ್ಪಡಿಸುತ್ತಿರುವ ನಿರ್ಲಕ್ಷö್ಯ ಗಂಭೀರವಾದುದಾಗಿದೆ ಎಂಬ ಮಾತುಗಳು ಶಿಬಿರದಲ್ಲಿ ಕೇಳಿಬಂದಿದೆ.