ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನಿರ್ದೇಶನದಲ್ಲಿ ಋಗ್ವೇದ ಸಲಕ್ಷಣ ಘನಪಾಠಿ ಬ್ರಹ್ಮಶ್ರೀ ನಾರಾಯಣಮೂರ್ತಿ ಕಾಂಞÂAಗಾಡ್ ಮತ್ತು ಬ್ರಹ್ಮಶ್ರೀ ಹರಿನಾರಾಯಣ ಮಯ್ಯ ಕುಂಬಳೆ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ೭ನೇ ವರ್ಷದ ಶ್ರೀಮದ್ಭಾಗವತ ಸಪ್ತಾಹ ಯಜ್ಞಕ್ಕೆ ಭಾನುವಾರ ಸಂಜೆ ಚಾಲನೆ ನೀಡಲಾಯಿತು.ಭಾನುವಾರ ಸಂಜೆ ೫ಕ್ಕೆ ಆಚಾರ್ಯರಾದ ನಾರಾಯಣಮೂರ್ತಿ ಗುರುಪುರಂ ಹಾಗೂ ಹರಿನಾರಾಯಣ ಮಯ್ಯ ಕುಂಬಳೆ ಮತ್ತು ದೇಲಂಪಾಡಿ ಬಾಲಕೃಷ್ಣ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ೫.೩೦ಕ್ಕೆ ನಡೆದ ಚಾಲನಾ ಸಮಾರಂಭದಲ್ಲಿ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಕಣಿಪುರ ಶ್ರೀಕ್ಷೇತ್ರದ ಅರ್ಚಕ ಮಾಧವ ಅಡಿಗ ಉಪಸ್ಥಿತರಿದ್ದರು.ಬಳಿಕ ಆಚಾರ್ಯರಿಂದ ಯಜ್ಞಾರಂಭ ನಡೆಯಿತು.
ಸೋಮವಾರ ಬೆಳಿಗ್ಗೆ ೬ಕ್ಕೆ ಗಣಪತಿ ಹೋಮ, ಹರಿನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ, ಗ್ರಂಥ ನಮಸ್ಕಾರ, ಬಳಿಕ ೮ ರಿಂದ ಮಧ್ಯಾಹ್ನ ೧೨ರ ತನಕ ಮತ್ತು ಅಪರಾಹ್ನ ೩ ರಿಂದ ಸಂಜೆ ೬ರ ತನಕ ಶ್ರೀಮದ್ಭಾಗವತ ಪಾರಾಯಣ ಮತ್ತು ಪ್ರವಚನ ನಡೆಯಿತು. ಸಂಜೆ ೬ ರಿಂದ ೭ರ ವರೆಗೆ ಯಜ್ಞಾಚಾರ್ಯರಿಂದ ಉಪನ್ಯಾಸ, ಬಳಿಕ ನಾಮ ಸಂಕೀರ್ತನೆ, ದೀಪರಾಧನೆ ನಡೆಯಿತು. ಉದ್ಘಾಟನಾ ಸಮಾರಂಭದ ಮೊದಲು ಶ್ರೀಕೃಷ್ಣ ವಿಗ್ರಹದ ಮೆರವಣಿಗೆ ನಡೆಯಿತು.
ಇಂದು(ಮoಗಳವಾರ) ಬೆಳಿಗ್ಗೆ ೬ ಕ್ಕೆ ಹಣಪತಿ ಹವನ, ಹರಿನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ, ಗ್ರಂಥ ನಮಸ್ಕಾರ, ಬಳಿಕ ೮ ರಿಂದ ಮಧ್ಯಾಹ್ನ ೧೨ರ ವರೆಗೆ ಮತ್ತು ಅಪರಾಹ್ನ ೩ ರಿಂದ ೬ರ ವರೆಗೆ ಶ್ರೀಮದ್ಭಾಗವತ ಪಾರಾಯಣ, ಸಂಜೆ ವಿಶೇಷ ಪೂಜೆ, ಯಜ್ಞಾಚಾರ್ಯರಿಂದ ಉಪನ್ಯಾಸ, ನಾಮ ಸಂಕೀರ್ತನೆ, ದೀಪಾರಾಧನೆ ನಡೆಯಲಿದೆ.