ಬದಿಯಡ್ಕ: ಯಕ್ಷ ನಾಟ್ಯಾಲಯ ದೇವರಕೆರೆ ಮಾನ್ಯ ಆಶ್ರಯದಲ್ಲಿ ಮಾನ್ಯ ಯಕ್ಷೋತ್ಸವ -೨೦೧೯ ನ.೯ ರಂದು ಸಂಜೆ ಮಾನ್ಯ ಶಾಲಾ ವಠಾರದಲ್ಲಿ ಜರಗಲಿದೆ. ರಾತ್ರಿ ೮ ರಿಂದ ಯಕ್ಷ ನಾಟ್ಯ ಕೇಂದ್ರ ದೇವರಕೆರೆ ಇದರ ವಿದ್ಯಾರ್ಥಿಗಳಿಂದ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಪುಂಡಿಕೈ ಗೋಪಾಲಕೃಷ್ಣ ಭಟ್, ಮುರಾರಿ ಕಡಂಬಳಿತ್ತಾಯ, ನೆಕ್ಕರೆಮೂಲೆ ಗಣೇಶ್ ಭಟ್, ರಾಜೇಂದ್ರ ಕೃಷ್ಣ ಸಹಕರಿಸಲಿದ್ದಾರೆ.
ರಾತ್ರಿ ೧೦ರಿಂದ ನಡೆಯುವ ಸಭಾ ಕಾರ್ಯಕ್ರಮವನ್ನು ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಉಳಿಯತ್ತಾಯ ವಿಷ್ಣು ಅಸ್ರ ಉದ್ಘಾಟಿಸಿ ಆಶೀವರ್ಚನ ನೀಡಲಿದ್ದಾರೆ. ಯಕ್ಷಗಾನ ಅಕಾಡೆಮಿ ಕೇರಳ ಸರಕಾರ ಇದರ ಮಾಜಿ ಅಧ್ಯಕ್ಷ ಜಯರಾಮ ಮಂಜತ್ತಾಯ ಅಧ್ಯಕ್ಷತೆ ವಹಿಸಲಿದ್ದು ನಿವೃತ್ತ ಮುಖ್ಯೋಪಾಧ್ಯಾಯ ಮಾನ ಮಾಸ್ತರ್ ಮಾನ್ಯ, ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ, ಅಂಚೆ ಅಧಿಕಾರಿ ಸುಂದರ ಶೆಟ್ಟಿ ಕೊಲ್ಲಂಗಾನ ಶುಭಾಶಂಸನೆಗೈಯುವರು. ಈ ಸಂದರ್ಭದಲ್ಲಿ ಯಕ್ಷ ನಾಟ್ಯಗುರು ರಾಕೇಶ್ ರೈ ಅಡ್ಕ ಅವರನ್ನು ಅಭಿನಂದಿಸಲಾಗುವುದು. ಯಕ್ಷ ನಾಟ್ಯಾಲಯದ ಅಧ್ಯಕ್ಷ ಕೆ.ಶ್ಯಾಮ ಪ್ರಸಾದ್ ಮಾನ್ಯ, ವಿಜಯಕುಮಾರ್ ಮಾನ್ಯ ಉಪಸ್ಥಿತರಿರುವರು.
ಆ ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾ-ನಿಷಾದ ಯಕ್ಷಗಾನ ಬಯಲಾಟ ಜರಗಲಿದೆ. ನುರಿತ ಕಲಾವಿದರು ಹಿಮ್ಮೇಳ ಮುಮ್ಮೇಳಗಳಲ್ಲಿ ಜನಮನ ರಂಜಿಸಲಿದ್ದಾರೆ.