ಕಾಸರಗೋಡು: ಜಿಲ್ಲಾ ವೈದ್ಯಕೀಯ ಕಚೇರಿ(ಆರೋಗ್ಯ) ವತಿಯಿಂದ ವಿಶ್ವ ಮಧುಮೇಹ ರೋಗ ನಿಯಂತ್ರಣ ದಿನಾಚರಣೆ ಅಂಗವಾಗಿ ಗುರುವಾರ ಜಿಲ್ಲೆಯಲ್ಲಿ ವಿವಿಧ ಸಮಾರಂಭಗಳು ನಡೆದುವು.
ಕಾಞಂಗಾಡಿನಲ್ಲಿ ಆನಂದಾಶ್ರಮದಿಂದ ಮಾವುಂಗಾಲ್ ವ್ಯಾಪಾರ ಭವನ ವರೆಗೆ ಮೆರವಣಿಗೆ ನಡೆಯಿತು. ತದನಂತರ ನಡೆದ ಸಾರ್ವಜನಿಕ ಸಮಾರಂಭವನ್ನು ನಗರಸಭೆ ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕೆ ಸತಿ ಉದ್ಘಾಟಿಸಿದರು. ಸಹಾಯಕ ಜಿಲ್ಲಾವೈದ್ಯಾಧಿಕಾರಿ ಡಾ.ಷಾಂಟಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರಾದ ಗೋಪಾಲನ್, ಪದ್ಮನಾಭನ್, ಗೀತ ಬಾಬುರಾಜ್, ಮೋಹನನ್, ಸಹಾಯಕ ಮಾಸ್ ಈಡಿಯಾ ಅಧಿಕಾರಿ ಅರುಣ್ ಲಾಲ್, ಐ.ಸಿ.ಡಿ.ಎಸ್. ಮೇಲ್ವಿಚಾರಕಿ ರೀಜಾ ಸುರೇಶ್, ಆರೋಗ್ಯ ಇನ್ಸ್ ಪೆಕ್ಟರ್ ಸಂತೋಷ್ ಉಪಸ್ಥಿತರಿದ್ದರು. "ಜೀವನ ಶೈಲಿ ಮತ್ತು ಸಿಹಿಮೂತ್ರರೋಗ" ಎಂಬ ವಿಷಯದಲ್ಲಿ ವಿಚಾರಸಂಕಿರಣ ನಡೆಯಿತು. ಆನಂದಾಶ್ರಮ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಯಮುನಾ ಸುಕುಮಾರ್ ಅವರ ನೇತೃತ್ವದಲ್ಲಿ ಜೀವನಶೈಲಿ ರೋಗಪತ್ತೆ ಶಿಬಿರ, ನೇತ್ರ ತಪಾಸಣೆ, ಜನಜಾಗೃತಿ ಮ್ಯಾಜಿಕ್ ಷೋ ಇತ್ಯಾದಿ ನಡೆದುವು.