ಮುಳ್ಳೇರಿಯ: ಜೀವನದಲ್ಲಿ ಕಷ್ಟದ ಪರಿಸ್ಥಿತಿ ಬಂದಾಗ ನಮ್ಮನ್ನು ರಕ್ಷಿಸುವುದು ನಮ್ಮ e್ಞÁನ ಮಾತ್ರ. ಅದನ್ನು ನಾವು ಕಷ್ಟಪಟ್ಟು ಸಂಪಾದಿಸಬೇಕು ಎಂದು ಎಂದು ಸಾಹಿತಿ ಕೇಶವ ಶೆಟ್ಟಿ ಆದೂರು ಹೇಳಿದರು.
ಅವರು ಕೇರಳ ಸರಕಾರದ ಶಿಕ್ಷಣ ಇಲಾಖೆಯು ನಡೆಸುತ್ತಿರುವ 'ಸಾಧಕರ ಜತೆ ಸಂವಾದ' ಎಂಬ ಅಭಿಯಾನದಂತೆ ಸಾಹಿತಿ ಕೇಶವ ಶೆಟ್ಟಿ ಆದೂರು ಅವರ ಮನೆಗೆ ಭೇಟಿ ನೀಡಿದ ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು. e್ಞÁನ ಸಂಪಾದನೆಯಲ್ಲಿ ಉದ್ಯೋಗದ ಲಕ್ಷ್ಯವೂ ಇರಬೇಕು. ಗಾಢವಾದ ಓದು ನಮ್ಮ e್ಞÁನಕ್ಕೆ ಮೂಲ ಕಾರಣವಾಗುತ್ತದೆ. ಸಾಹಿತ್ಯದ ಎಲ್ಲಾ ಪ್ರಕಾರಗಳು, ವಿಚಾರಗಳನ್ನೂ ನಾವು ಓದಬೇಕು. ಆ ರೀತಿ ಮಕ್ಕಳು ಮುಂದೆ ಬರಬೇಕು. ತುಳು ಭಾಷೆ ಎಂದರೆ ಸಮ ಮಟ್ಟಕ್ಕಿಂತ ಮೇಲು ಎಂಬ ಅರ್ಥ. ಅದು ಸೀಮಾತೀತ ಭಾಷೆ ಎಂದು ಅವರು ಹೇಳಿದರು.
ಶಿಕ್ಷಕಿಯರಾದ ವನಜ, ಸುನಿತಾ, ಶಿಕ್ಷಕ ನವಪ್ರಸಾದ್ ನೇತೃತ್ವ ನೀಡಿದರು. ಹಿರಿಯ ಶಿಕ್ಷಕ ಶಂಕರ್ ರಾಜ್ ಕಾರ್ಯಕ್ರಮವನ್ನು ಸಂಯೋಜಿಸಿದರು.
ಸಾಧಕರನ್ನು ಭೇಟಿಯಾಗುವ ಮತ್ತು ಅವರ ಜೀವನದ ಅನುಭವವನ್ನು ಹಂಚಿಕೊಳ್ಳಲು ಈ ಕಾರ್ಯಕ್ರಮದ ಮೂಲಕ ಸಾಧ್ಯವಾಗುತ್ತಿದೆ. ಈ ಸಂದರ್ಭದಲ್ಲಿ ಕೇಶವ ಶೆಟ್ಟಿಯವರು ತಮ್ಮ ಸಾಹಿತ್ಯ ರಚನೆಯ ಕೆಲವು ಜೀವನಾನುಭವಗಳನ್ನು ತಿಳಿಸಿಕೊಟ್ಟರು. ಇವರಿಗೆ ಸಾಹಿತ್ಯ ಸೇವೆಗಾಗಿ ಹಲವು ಮಾನ ಸನ್ಮಾನಗಳು ಲಭಿಸಿವೆ. ಇವರ ಹಲವು ಲೇಖನಗಳು ದಿನ ಪತ್ರಿಕೆಗಳಲ್ಲಿ ಯೂ ಬೆಳಕು ಕಂಡಿವೆ. ಸರಕಾರದ ಈ ಯೋಜನೆಯಿಂದ ಸ್ಥಳೀಯರಾದ ಹಲವು ಪ್ರತಿಭೆಗಳನ್ನು ಗುರುತಿಸಿಕೊಳ್ಳಲು, ಪ್ರಚುರಪಡಿಸಲು ಸಾಧ್ಯವಾಗಬಹುದು.