ಕುಂಬಳೆ: ಉಪಜಿಲ್ಲಾ ಹಂತದ ವಿಜ್ಞಾನೋತ್ಸವ, ಕಲೋತ್ಸವ ಹಾಗೂ ಕ್ರೀಡೋತ್ಸವದಲ್ಲಿ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯು ವಿವಿಧ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. ವಿಜ್ಞಾನೋತ್ಸವದ ಹಿರಿಯ ಪ್ರಾಥಮಿಕ ವಿಭಾಗದ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಗಳಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ವಿಜ್ಞಾನ, ಗಣಿತ ಮೇಳದಲ್ಲೂ ಚಾಂಪಿಯನ್‌ಶಿಪ್ ಪಡೆದರು.
ಕ್ರೀಡೋತ್ಸವದ ಕಿಡ್ಡೀಸ್ ಹುಡುಗಿಯರ ಚಾಂಪಿಯನ್‌ಶಿಪ್ ಪಡೆದ ಶಾಲೆಯು ಕಲೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನವನ್ನು ತನ್ನದಾಗಿಸಿಕೊಂಡಿತು. ಮಕ್ಕಳ ಶ್ರೇಷ್ಠ ನಿರ್ವಹಣೆಗೆ ಕುಂಬಳೆ ಪೇಟೆಯಲ್ಲಿ ಸಂತಸದ ವಿಜಯೋತ್ಸವ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳನ್ನು ಶಾಲಾ ಪ್ರಬಂಧಕ, ಮುಖ್ಯೋಪಾಧ್ಯಾಯಿನಿ, ರಕ್ಷಕ ಶಿಕ್ಷಕ ಸಂಘ ಹಾಗೂ ಮಾತೃ ಮಂಡಳಿ ಅಭಿನಂದನೆಗಳನ್ನು ಸಲ್ಲಿಸಿವೆ.