ಕಾಸರಗೋಡು: ರೈತ ಸಾಲ ಪರಿಹಾರ ಆಯೋಗ ನೀಡುವ ಸವಲತ್ತನ್ನು ಒಂದು ಲಕ್ಷ ರೂ. ಯಿಂದ ಎರಡು ಲಕ್ಷ ರೂ. ಆಗಿ ಹೆಚ್ಚಿಸಲಾಗುವುದೆಂದು ಸಚಿವ ಇ.ಚಂದ್ರಶೇಖರನ್ ತಿಳಿಸಿದ್ದಾರೆ. ಇದಕ್ಕಾಗಿ ೨೦೦೭ ರ ಕೇರಳ ರೈತ ಸಾಲ ಪರಿಹಾರ ಕಾನೂನಿನ ಐದನೇ ಪರಿಚ್ಛೇದದ ಮೂರನೇ ಉಪ ಪರಿಚ್ಛೇದದಲ್ಲಿ ಅಗತ್ಯದ ತಿದ್ದುಪಡಿ ತಂದು ೨೦೧೯ ರ ಕೇರಳ ರೈತ ಸಾಲ ಪರಿಹಾರ ಆಯೋಗ(ತಿದ್ದುಪಡಿ) ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಕೃಷಿಕರು ಪಡೆದ ಎಲ್ಲಾ ಸಾಲಗಳನ್ನು ಕೃಷಿ ಸಾಲದ ವ್ಯಾಪ್ತಿಯೊಳಗೆ ತರಲಾಗುವುದು. ಕೃಷಿ ಅಗತ್ಯಗಳಿಗಾಗಿ ಸಹಕಾರಿ ಬ್ಯಾಂಕ್‌ಗಳಿAದ ಲಭಿಸುವ ಸಾಲ ಮೊತ್ತವನ್ನು ಈಗ ಎರಡು ಲಕ್ಷ ರೂ.ಗೇರಿಸಲಾಗಿದೆ. ಸಾಲ ಪರಿಹಾರ ಆಯೋಗದ ವ್ಯಾಪ್ತಿಗೊಳಪಡಲು ಇತರ ಬ್ಯಾಂಕ್‌ಗಳೂ ಈಗ ತಯಾರಾಗಿದೆ. ಅದನ್ನು ಪರಿಶೀಲಿಸಲಾಗುವುದೆಂದು ಕೃಷಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ. ರಾಜ್ಯದ ಬ್ಯಾಂಕ್‌ಗಳು ಕೃಷಿಗಾಗಿ ೮೦,೦೦೦ ಕೋಟಿ ರೂ.ಗಳ ಸಾಲ ನೀಡಿವೆ.
ಮೂರು ಸೆಂಟ್ ಜಮೀನಿನ ದಾಖಲು ಪತ್ರ ಸಮರ್ಪಿಸಿ ಮೂರು ಲಕ್ಷ ರೂ. ಕೃಷಿ ಸಾಲ ಪಡೆಯುವ ರೀತಿಯನ್ನು ಅಂಗೀಕರಿಸಲು ಸಾಧ್ಯವಿಲ್ಲವೆಂದೂ ಇದೇ ಸಂದರ್ಭದಲ್ಲಿ ಸಚಿವರು ಸ್ಪಷ್ಟಪಡಿಸಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ನೀಡಲಾಗುವ ಕೃಷಿ ಸಾಲ ಮಿತಿಯನ್ನು ೩.೫೦ ಲಕ್ಷ ರೂ. ತನಕ ಏರಿಸಬೇಕೆಂದು ಸರಕಾರ ಆಗ್ರಹಿಸಿದೆ ಎಂದು ಸಚಿವರು ಹೇಳಿದ್ದಾರೆ.