ಕಾಸರಗೋಡು: ಕೇಂದ್ರ ಸರಕಾರದ ಐ.ಎ.ಎಸ್(ಇಂಡಿಯನ್ ಆಡ್ಮಿನಿಸ್ಟ್ರೇಟಿವ್ ಸರ್ವೀಸ್) ಎಂಬ ಸಿವಿಲ್ ಸರ್ವೀಸ್ ಮಾದರಿಯಲ್ಲಿ ಕೇರಳ ಸರಕಾರವು ತನ್ನ ಸ್ವಂತ ಸಿವಿಲ್ ಸರ್ವೀಸ್ ಸೇವೆ ಆರಂಭಿಸಿದೆ.
ಕೇರಳ ಆಡ್ಮಿನಿಸ್ಟ್ರೇಟಿವ್ ಸರ್ವೀಸ್(ಕೆ.ಎ.ಎಸ್) ಎಂಬ ಹೆಸರಿನಲ್ಲಿ ಈ ಸಿವಿಲ್ ಸರ್ವೀಸ್ ಪರೀಕ್ಷೆ ನಡೆಸಲಾಗುವುದು. ಈ ಬಗ್ಗೆ ರಾಜ್ಯ ಸರಕಾರ ವಿದ್ಯುಕ್ತ ಅಧಿಸೂಚನೆಯನ್ನು ಹೊರಡಿಸಿದೆ. ಇದರಂತೆ ಕೆ.ಎ.ಎಸ್. ಸಿವಿಲ್ ಪರೀಕ್ಷೆಗೆ ಬರೆಯಲು ಆಸಕ್ತಿ ಇರುವವರು ಡಿಸೆಂಬರ್ ೪ ರೊಳಗಾಗಿ ಅರ್ಜಿ ಸಲ್ಲಿಸಬೇಕು. ಕೆ.ಎ.ಎಸ್. ಆಫೀಸರ್ ಜ್ಯೂನಿಯರ್ ಟೈಮ್ ಸ್ಕೇಲ್ ಟ್ರೆÊನೀ ಎಂಬ ಹೆಸರಿನಲ್ಲಿ ಮರು ವಿಭಾಗಗಳಾಗಿ ಅಧಿಸೂಚನೆ ಜಾರಿಗೊಳಿಸಿದೆ. ಈ ಮೂರು ಕ್ಯಾಟಗರಿಗಳ ಪ್ರಕಾರ ಒಂದನೇ ಕ್ಯಾಟಗರಿ ನಂಬ್ರ ೧೮೬/೨೦೧೯ ರ ಪ್ರಕಾರ ನೇರ ನೇಮಕಾತಿ ನಡೆಸಲಾಗುವುದು. ಎರಡನೇ ಕ್ಯಾಟಗರಿ ನಂಬ್ರ ೧೮೭/೨೦೧೯ ಪ್ರಕಾರ ಈಗ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿ ಆ ಹುದ್ದೆಯಲ್ಲಿ ಖಾಯಂಗೊAಡ ಸಿಬ್ಬಂದಿಗಳು ಈ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಬಹುದು.
ಮೂರನೇ ಕ್ಯಾಟಗರಿ ನಂಬ್ರ ೧೮೮/೨೦೧೯ ಪ್ರಕಾರ ಒಂದನೇ ಶ್ರೇಣಿಯ ಗಜೆಟೆಡ್ ಹುದ್ದೆಯಲ್ಲಿರುವವರು ಈ ಪರೀಕ್ಷೆ ಬರೆಯಬಹುದು. ಕನಿಷ್ಠ ಪದವಿ ಪರೀಕ್ಷೆ ಉತ್ತೀರ್ಣರಾದವರು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಮೊದಲ ಕ್ಯಾಟಗರಿಗೆ ಸೇರಿದವರು ಗರಿಷ್ಠ ವಯೋಮಿತಿಯನ್ನು ೩೨ ಆಗಿಯೂ, ಎರಡನೇ ಕ್ಯಾಟಗರಿಗೆ ಗರಿಷ್ಠ ೪೦ ಮತ್ತು ಮೂರನೇ ಕ್ಯಾಟಗರಿಗೆ ಗರಿಷ್ಠ ೫೦ ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ವಿ`Áಗಕ್ಕೆ ಸೇರಿದವರಿಗೆ ವಯೋಮಿತಿಯಲ್ಲಿ ರಿಯಾಯಿತಿ ನೀಡಲಾಗುವುದು. ಅದೇ ರೀತಿ ಅಂಗವಿಕಲರಿಗೆ ಶೇ.೪ ಮತ್ತು ವಿ`Àವೆಯರಿಗೆ ಈಗಿರುವ ರೀತಿಯ ರಿಯಾಯಿತಿ ಮುಂದುವರಿಯಲಿದೆ. ಒಂದಕ್ಕಿAತ ಹೆಚ್ಚು ಕ್ಯಾಟಗರಿಗಳಲ್ಲಿ ಪರೀಕ್ಷೆ ಬರೆಯುವವರು ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಆದರೆ ತೆರವಿರುವ ಹುದ್ದೆಗಳನ್ನು ನಿಗದಿಪಡಿಸಲಾಗಿಲ್ಲ. ಈ ಪರೀಕ್ಷೆ ಮೂಲಕ ನೇಮಕಾತಿ ನಡೆಯುವ ಸಾ`À್ಯತೆ ಇದೆ. ಕೆ.ಎ.ಎಸ್. ಸಿವಿಲ್ ಸರ್ವೀಸ್ ಲಿಖಿತ ಪರೀಕ್ಷೆಯ ರ‍್ಯಾಂಕ್ ಪಟ್ಟಿಯಲ್ಲಿ ಕೇರಳ ರಾಜ್ಯೋತ್ಸವ ದಿನವಾದ ಮುಂದಿನ ವರ್ಷ ನವೆಂಬರ್ ೧ ರೊಳಗಾಗಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಇದರ ರ‍್ಯಾಂಕ್ ಪಟ್ಟಿಗೆ ಒಂದು ವರ್ಷ ನಿರ್ಣಯಿಸಲಾಗಿದೆ. ಉದ್ಯೋಗಾರ್ಥಿ ಆಯ್ಕೆಗಾಗಿ ಮೂರು ಹಂತಗಳನ್ನು ಏರ್ಪಡಿಸಲಾಗಿದೆ.
ಇದರಂತೆ ಮೊದಲ ಹಂತದ ಪ್ರಾಥಮಿಕ ಪರೀಕ್ಷೆ ೨೦೨೦ ಫೆಬ್ರವರಿಯಲ್ಲಿ ನಡೆಸಲಾಗುವುದು. ದ್ವಿತೀಯ ಹಂತದಲ್ಲಿ ವಿವರಣಾತ್ಮಕ ಪರೀಕ್ಷೆ ನಡೆಸಲಾಗುವುದು. ಮೂರನೇ ಹಂತದಲ್ಲಿ ಸಂದರ್ಶನ ನಡೆಸಲಾಗುವುದು. ಈ ಮೂರು ಹಂತದಲ್ಲಿ ಉತ್ತೀರ್ಣರಾದವರನ್ನು ಅಂಕಗಳ ಆ`Áರದಲ್ಲಿ ರ‍್ಯಾಂಕ್ ಪಟ್ಟಿ ತಯಾರಿಸಿ ಆ ಮೂಲಕ ನೇಮಕಾತಿ ನಡೆಸಲಾಗುವುದು.
ಪ್ರಧಾನ ಪರೀಕ್ಷೆಗಳೆಲ್ಲವೂ ಇಂಗ್ಲೀಷ್‌ನಲ್ಲೇ ನಡೆಸಲಾಗುವುದು. ಮಲಯಾಳದಲ್ಲೂ ಬರೆಯಬಹುದು. ಆದರೆ ಭಾಷಾ ಅಲ್ಪಸಂಖ್ಯಾಕರಿಗೆ ರಿಯಾಯಿತಿ ನೀಡಲಾಗಿಲ್ಲ.