ಕುಂಬಳೆ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಇತ್ತೀಚೆಗೆ ಆಯೋಜನೆಗೊಂಡ ವೃತ್ತಿ ಪರಿಚಯ ಮೇಳದಲ್ಲಿ ಕಿದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದಿದ್ದಾರೆ.
ಕಿದೂರು ಶಾಲೆಯ ವಿದ್ಯಾರ್ಥಿಗಳಾದ ಮಧುಸೂದನ್ ಕೆ.ಎಸ್ ಪ್ರದರ್ಶಿಸಿದ ವೆಜಿಟೇಬಲ್ ಪೈಂಟಿAಗ್ ನಲ್ಲಿ ಪ್ರಥಮ, ಹಾಗೂ ಕಾರ್ಡ್ ಸ್ಟೊçà ಬೋರ್ಡ್ ವಿಭಾಗದಲ್ಲಿ ಗೌತಮ್ ಕೆ. ದ್ವಿತೀಯ ಬಹುಮಾನಗಳನ್ನು ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘ ಅಭಿನಂದಿಸಿದೆ.