ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ.ಕುಟುAಬಶ್ರೀ ಸಿಡಿಎಸ್ ಸ್ನೇಹಿತ ಕಾಲಿಂಗ್ ಬೆಲ್ ಸಂಗಮ ಕುಟುಂಬಶ್ರೀ ಕಾರ್ಯಾಲಯ (ಪಂಚಾಯಿತಿ ಸಭಾಂಗಣದಲ್ಲಿ) ಮಂಗಳವಾರ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಲತಾ ಯುವರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಸಿಡಿಎಸ್ ಅಧ್ಯಕ್ಷೆ ಮಾಲಿನಿ ಎನ್.ಅಧ್ಯಕ್ಷತೆ ವಹಿಸಿದರು. ಪಂಚಾಯಿತಿ ಉಪಾಧ್ಯಕ್ಷ ಪುರುಷೋತ್ತಮನ್ ಸಿ.ವಿ., ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಮಾಲತಿ ಜೆ ರೈ ಶುಭ ಹಾರೈಸಿದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸ್ನೇಹಿತ ಕಾಲಿಂಗ್ ಬೆಲ್ ಯೋಜನೆ ಸಂಯೋಜಕಿ ಆರತಿ ಮೆನೋನ್ ಮತ್ತು ರೀತು ತರಗತಿ ನೀಡಿದರು.ಉದಯ ಕುಂಡAಕುಯಿ ಉತ್ತಮ ರೀತಿಯಲ್ಲಿ ಫ್ರಾಕ್ ಸೋಂಗ್ ಹೇಳಿಕೊಟ್ಟರು. ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ., ಬ್ಲಾಕ್.ಪಂ. ಸದಸ್ಯೆ ಸತ್ಯವತಿ ಸಿ. ರೈ, ಪಂಚಾಯಿತಿ ಸದಸ್ಯರಾದ ಉಷ, ವಿಶಾಲಾಕ್ಷಿ ಬಿ.ಆರ್., ರಾಧಾಕೃಷ್ಣ, ರಾಧಾ ವಿ., ಪಂಚಾಯಿತಿ ಕಾರ್ಯದರ್ಶಿ ದಾಮೋದರನ್, ಬ್ಲಾಕ್ ಸಂಯೋಜಕ ಗೀತು, ಅನಿಮೇಟರ್ ಶಿವಪ್ರಕಾಶ್, ಕುಟುಂಬಶ್ರೀ ಎಡಿಎಸ್, ಸಿಡಿಎಸ್ ಸದಸ್ಯರು, ಕಾರ್ಯಕರ್ತರು, ಸ್ನೇಹಿತ ಕಾಲಿಂಗ್ ಬೆಲ್ ಸದಸ್ಯರು ಉಪಸ್ಥಿತರಿದ್ದರು.
ಕುಟುಂಬಶ್ರೀ ಕಾರ್ಯದರ್ಶಿ, ಪಂಚಾಯಿತಿ ವಿ.ಇ.ಒ.ಅನೀಶ್ ಸ್ವಾಗತಿಸಿ, ಲೆಕ್ಕ ಪರಿಶೋಧಕಿ ನಿವೇದಿತ ಸಿ.ಎಚ್.ವಂದಿಸಿದರು.