ಕಾಸರಗೋಡು: ದೇಶದಲ್ಲೇ ಅತ್ಯುತ್ತಮ ಜಿಲ್ಲಾ ಆಸ್ಪತ್ರೆ ಎಂಬ ಖ್ಯಾತಿ ನೀಡುವ'ರಾಷ್ಟ್ರೀಯ ಗುಣಮಟ್ಟ ಭರವಸೆ ಶ್ರೇಣಿ ಅರ್ಹತಾಪತ್ರ'(ನ್ಯಾಷನಲ್‍ಕ್ವಾಲಿಟಿ ಅಷ್ಯುರೆನ್ಸ್ ಸ್ಟಾಂಡರ್ಡ್ ಸರ್ಟಿಫಿಕೆಟ್)ದ ಹಿರಿಮೆ ಗೆ ಕಾಞಂಗಾಡಿನಲ್ಲಿ ಕಾರ್ಯಾಚರಿಸುವ ಕಾಸರಗೋಡು ಜಿಲ್ಲಾ ಆಸ್ಪತ್ರೆ ಭಾಜನವಾಗಿದೆ.
ಅರ್ಹತಾಪತ್ರದ ಜತೆಗೆ 1.20ಕೋಟಿ ರೂ.ನಗದು ಬಹುಮಾನವೂ ಲಭ್ಯಾಗಿದೆ. ಜಿಲ್ಲಾ ಆಸ್ಪತ್ರೆಗಾಗಿ ಜಿಲ್ಲಾ ಪಂಚಾಯಿತಿ ಅನೇಕ ಯೋಜನೆಗಳನ್ನು ರಚಿಸಿ ಜಾರಿಗೊಳಿಸಿದೆ. ಅತ್ಯುತ್ತಮ ಶುಚಿತ್ವ,ಉತ್ತಮ ಆರೋಗ್ಯಪ್ರದಾನ ಸೌಲಭ್ಯಕ್ಕಾಗಿ 2017ರಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನಪಡೆದಿದ್ದು, ಈ ಸಂಬಂಧ ಕಾಯಕಲ್ಪ ಪ್ರಶಸ್ತಿಯನ್ನೂ ಗಳಿಸಿಕೊಂಡಿತ್ತು. 2018ರಲ್ಲಿ ಈ ಸಂಬಂಧ ಆಸ್ಪತ್ರೆ ಎರಡನೇ ಸ್ಥಾನಕ್ಕೇರಿತ್ತು. 2019ರಲ್ಲಿ ಈ ಸಾಲಿನಲ್ಲಿಪ್ರಥಮ ಬಹುಮಾನವನ್ನು ಆಸ್ಪತ್ರೆ ಪಡೆದುಕೊಂಡಿದೆ. 2019 ಮೇ ತಿಂಗಳಲ್ಲಿ ಮೂರು ದಿವಸಗಳ ಕಾಲ ಪರಿಣತರಾದ ಮೂವರು ವೈದ್ಯರ ಸಹಿತ ಕೇಂದ್ರ ತಪಾಸಣಾ ತಂಡ ಆಸ್ಪತ್ರೆಗೆ ಭೇಟಿ ನೀಡಿ ಗುಣಮಟ್ಟದ ತಪಾಸಣೆ ನಡೆಸಿ, ನ್ಯಾಷನಲ್ ಕ್ವಾಲಿಟಿ ಅಷ್ಯರೆನ್ಸ್ ಸ್ಟಾಂಡಾಡ್ರ್ಸ್‍ಗೆಶಿಫಾರಸುಮಾಡಿತ್ತು. 2020 ಜನವರಿ ತಿಂಗಳಲ್ಲಿ ಇಲ್ಲಿ ಕಾತ್‍ಲ್ಯಾಬ್ ಸಜ್ಜುಗೊಳ್ಳಲಿದ್ದು, ಈ ಮೂಲಕ ಜಿಲ್ಲೆಯಲ್ಲೇ ಹೃದ್ರೋಗ ಸಂಬಂಧ ಆಂಜಿಯಾಪ್ಲಾಸ್ಟ್ ನಡೆಸಬಹುದಾಗಿದೆ. ಮದ್ಯ ಸಹಿತ ಮಾದಕ ಪದಾರ್ಥದ ಸೇವನೆಯ ಪಿಡುಗಿನಿಂದ ವಿಮೋಚನೆಗಾಗಿ ಜಿಪಂ ಸಿದ್ಧಪಡಿಸುತ್ತಿರುವ ಡಿ-ಅಡಿಕ್ಷನ್ ಸೆಂಟರ್ ಫೆಬ್ರವರಿ ತಿಂಗಳಲ್ಲಿ ಆಸ್ಪತ್ರೆಯಲ್ಲಿ ಚಟುವಟಿಕೆ ಆರಂಭಿಸಲಿದೆ. ಜತೆಗೆ ಎಂಡೋಸಲ್ಫಾನ್ ಪ್ಯಾಕೇಜ್ ಸಹಿತ 5 ಅಂತಸ್ತಿನ ಕಟ್ಟಡ ವಿದ್ಯುದೀಕರಣ ಕಾರ್ಯ ಪೂರ್ತಿಗೊಳ್ಳಲಿದೆ. ಈಮೂಲಕ ಆಸ್ಪತ್ರೆಯಲ್ಲಿ ಜಾಗದ ಕೊರತೆಗೆ ಶಾಶ್ವತ ಪರಿಹಾರ ಸಾಧ್ಯವಾಗಲಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಐ.ಪಿ ಮತ್ತು ಒ.ಪಿ.ವಿಭಾಗದಲ್ಲಿ ಶೇ 30ರಿಂದ 35ರಷ್ಟು ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವುಂಟಾಗಿದೆ. ಆಸ್ಪತ್ರೆಯಅಭಿವೃದಿಗಾಗಿ ರಾಜ್ಯ ಸರ್ಕಾರದ ಆರೋಗ್ಯ ವಲಯಸಂಬಂಧಿ ಚಟುವಟಿಕೆಗಳು ಪೂರಕವಾಗಿರುವುದಾಗಿ ಜಿಪಂ ಅಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅರ್ಹತಾ ಪತ್ರ ಪ್ರದಾನ:
ಈ ಸಂಬಂಧ ಇತ್ತೀಚೆಗೆ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಟೀಚರ್ ಅರ್ಹತಾ ಪತ್ರ ಪ್ರದಾನ ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅವರ ನೇತೃತ್ವದಲ್ಲಿ ಆಸ್ಪತ್ರೆ ಸಿಬ್ಬಂದಿ ಪಡೆದುಕೊಂಡಿದ್ದಾರೆ.ಆಸ್ಪತ್ರೆಯ ವೈದ್ಯರಿಂದ ತೊಡಗಿ ಸಾಮಾನ್ಯ ಸಿಬ್ಬಂದಿ ವರೆಗೆ ಪ್ರತಿಯೊಬ್ಬರೂ ಏಕಮನಸ್ಸಿನಿಂದ ನಡೆಸಿದ ನಿಸ್ಪೃಹ ದುಡಿಮೆಯ ಫಲವಿದು ಎಂದು ಈ ಬಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಬಶೀರ್ ಪ್ರತಿಕ್ರಿಯೆ ನೀಡಿದ್ದಾರೆ.