ನವದೆಹಲಿ: ಅಯೋಧ್ಯೆ ತೀರ್ಪಿನಲ್ಲಿ ಮುಸ್ಲಿಂರಿಗೆ 5 ಎಕರೆ ಭೂಮಿ ನೀಡುವಂತೆ ಸುಪ್ರೀಂ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಕೆಗೆ ಯೋಚಿಸಲಾಗಿದೆ ಎಂದು ಹಿಂದೂ ಮಹಾಸಭಾ ಹೇಳಿಕೆ ಬೆನ್ನಲ್ಲೇ ಇದೀಗ ಮಸೀದಿ ಪರ ಮೊದಲ ದಾವೆದಾರ ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ಬಿ)ಯ ಬೆಂಬಲದೊಂದಿಗೆ ಮುಸ್ಲಿಂ ದಾವೆದಾರರೊಬ್ಬರ ಮೊದಲ ಪುತ್ರ ಮೊಹಮ್ಮದ್ ಉಮರ್ ಹೇಳಿದ್ದಾರೆ. ಅಯೋಧ್ಯೆಯಲ್ಲಿ ಮಾತನಾಡಿದ ಉಮರ್ ಅಯೋಧ್ಯೆಯ 67 ಎಕರೆ ಜಾಗದ ಹೊರಗಡೆ ಮಸೀದಿಗೆ ಜಾಗ ನೀಡುವುದನ್ನು ನಾವು ಒಪ್ಪುವುದಿಲ್ಲ. ಹೀಗಾಗಿ ನಾವು ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಬಾಬ್ರಿ ಮಸೀದಿ ಪರ ಆರು ದಾವೆದಾರರ ಪೈಕಿ ಒಬ್ಬರಾಗಿದ್ದ ಮೊಹಮ್ಮದ್ ಫಾರೂಕ್ ಅವರ ಪುತ್ರ ಉಮರ್ ಈ ಹೇಳಿಕೆಯನ್ನು ನೀಡಿದ್ದಾರೆ.