ಕಾಸರಗೋಡು: ತೆಂಗಿನ ನಾರಿನ ಭೂಹಾಸು ಸಂಬAಧ ರೂಪುರೇಷೆ ಸಿದ್ಧಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕಾರ್ಯಾಗಾರ ಕಾಞಂಗಾಡ್ ವ್ಯಾಪಾರಭವನದಲ್ಲಿ ಮಂಗಳವಾರ ಜರುಗಿತು.
ಜಿಲ್ಲೆಯ ಸ್ಥಳೀಯಾಡಿತ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ತೊರೆ, ಹಳ್ಳ ಇತ್ಯಾದಿಗಳ ಸಂರಕ್ಷಣೆ ಚಟುವಟಿಕೆಗಳಿಗೆ, ಗ್ರಾಮೀಣ ರಸ್ತೆಗಳ, ಕಾಲ್ಡಿಗೆ ಹಾದಿಗಳ ನಿರ್ಮಾಣ ಕಾಮಗಾರಿಗಳಿಗೆ ತೆಂಗಿನನಾರಿನ ಭೂಹಾಸು ವನ್ನು ಪರಿಣಾಮಕಾರಿಯಾಗಿ ಬಳಸುವ ಯೋಜನೆ ಘೋಷಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ನಡೆಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ವಿ.ಗೌರಿ, ಪಂಚಾಯತ್ ಸಹಾಯಕ ನಿರ್ದೇಶಕ ಟಿ.ಜೆ.ಅರುಣ್, ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ತೆಂಗಿನ ನಾರು ಡೈರೆಕ್ಟರೇಟ್ ನ ಸಹಕಾರಿ ಇನ್ಸ್ ಪೆಕ್ಟರ್ ಟಿ.ರೋಜಿಮೋನ್ ಉಪಸ್ಥಿತರಿದ್ದರು. ಎನ್.ಸಿ.ಆರ್.ಎಂ.ಎ. ನಿರ್ದೇಶಕ ಡಾ.ಅನಿಲ್ ಕೆ.ಆರ್., ಕಯರ್ ಫೆಡ್ ಮಾರ್ಕೆಟಿಂಗ್ ಮೆನೆಜರ್ ಕೆ.ಪ್ರದೀಪ್ ವಿವಿಧ ವಿಷಯಗಳಲ್ಲಿ ತರಗತಿ ನಡೆಸಿದರು. ಸಹಾಯಕ ನೋಂದಣಿ ಅಧಿಕಾರಿ ಟಿ.ಶಿವಶಂಕರ್ ಸ್ವಾಗತಿಸಿದರು. ತೆಂಗಿನ ನಾರು ಇನ್ಸ್ ಪೆಕ್ಟರ್ ಮಂಜೂಷಾ ಶ್ರೀಧರ್ ವಂದಿಸಿದರು. ತೆಂಗಿನ ನಾರು ಯೋಜನೆ ಅಧಿಕಾರಿ ಪಿ.ವಿ.ರವೀಂದ್ರ ಕುಮಾರ್ ವರದಿ ವಾಚಿಸಿದರು. ಜಿಲ್ಲೆಯ ವಿವಿಧ ಬ್ಲೋಕ್, ಗ್ರಾಮಪಂಚಾಯತ್ ಅಧ್ಯಕ್ಷರು,ನಿರ್ವಹಣೆ ಅಧಿಕಾರಿಗಳು ಉಪಸ್ಥಿತರಿದ್ದರು.