HEALTH TIPS

ಮಕ್ಕಳ ಹಕ್ಕುಗಳ ಬಗ್ಗೆ ಸಮಾಜ ಜಾಗೃತವಾಗಬೇಕು: ನ್ಯಾಯಮೂರ್ತಿ ಡಿ. ಅಜಿತ್ ಕುಮಾರ್

          ಕಾಸರಗೋಡು: ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳೂ ಸಮಾಜದಲ್ಲಿ ನಮ್ಮೊಂದಿಗೆ ಬೆಳೆಯಬೇಕಾದವರೇ ಎಂಬ ಮೂಲಭೂತ ಹಕ್ಕನ್ನು ಒದಗಿಸಿ, ಅವರನ್ನು ಸಂರಕ್ಷಿಸಬೇಕಾದ ಅನಿವಾರ್ಯತೆಯಿದೆ. ಅವರನ್ನು ಮಕ್ಕಳು ಎಂದೇ ಕಾಣುವ ಮನೋಧರ್ಮ ಬೆಳೆದುಬರಬೇಕು ಎಂದು ಜಿಲ್ಲಾ ನ್ಯಾಯಮೂರ್ತಿ ಡಿ.ಅಜಿತ್ ಕುಮಾರ್ ತಿಳಿಸಿದರು. 
       ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೇತೃತ್ವದಲ್ಲಿ ಆಯ್ದ ೪೦ ಶಾಲೆಗಳ ಮಕ್ಕಲಿಗಾಗಿ ವಿದ್ಯಾನಗರದ ಚಿನ್ಮಯಾ ವಿದ್ಯಾಲಯದಲ್ಲಿ ಗುರುವಾರ ನಡೆದ ಕಾನೂನು ಸಂರಕ್ಷಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
      ಮಕ್ಕಳ ಮೇಲೆ ನಡೆಯುವ ದೌರ್ಜನ್ಯವನ್ನು ಕಾನೂನಿನ ಬಲದಿಂದ ಮಾತ್ರ ನಿಯಂತ್ರುಸುವುದು ಕಷ್ಟಸಾಧ್ಯ. ಹೆತ್ತವರ, ಶಿಕ್ಷಕರ, ಸಾರ್ವಜನಿಕರ ಮಧ್ಯಸ್ಥಿಕೆಯಿಂದ ಮಾತ್ರ ಮಕ್ಕಳ ಹಕ್ಕು ಸಂರಕ್ಷಣೆ ಸಾಧ್ಯ ಎಂದವರು ನುಡಿದರು. ಹಿರಿಯರಂತೆಯೇ ಮಕ್ಕಳಿಗೂ ಖಾಸಗಿತನವಿದೆ. ಮಲಗುವ ಜಾ, ಸಂಚರಿಸುವ ಹಾದಿ, ಆಟವಾಡುವ ಪ್ರದೇಶ ಇತ್ಯಾದಿಗಳಲ್ಲಿ ಅತಿಕ್ರಮಣ ಸಲ್ಲದು. ಮಕ್ಕಳು ದೂರು ನೀಡಿದ ವೇಳೆ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳದೆ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವ ಕ್ರಮ ಅನೇಕ ಬಾರಿ ಬೃಹತ್ ದುರಂತಗಳಿಗೆ ಕಾರಣವಾಗುವುದಿದೆ ಎಂದರು.
     ಚೀಫ್ ಜ್ಯುಡೀಶಿಯಲ್ ಮೆಜಿಸ್ಟ್ರೇಟ್ , ಡಿ.ಎಲ್.ಎಸ್.ಎ. ಪ್ರಭಾರ ಕಾರ್ಯದರ್ಶಿ ಮುಜೀಬ್ ರಹಮಾನ್ ಅವರು ಮಕ್ಕಳು ಮತ್ತು ಯುವಜನತೆಗ ಹಾದಿತಪ್ಪುತ್ತಿರುವ ಬಗ್ಗೆ ಜಾಗೃತಿ ತರಗತಿ ನಡೆಸಿದರು. ಮಕ್ಕಳ ಸಂರಕ್ಷಣೆಗಿರುವ ಅನೇಕ ಕಾನೂನುಗಳ ಮತ್ತು ಅವುಗಳ ಬಳಕೆಯ ಬಗ್ಗೆ ಅವರು ಮಾಹಿತಿ ನೀಡಿದರು.   
       ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಮುಖ್ಯ ಅತಿಥಿಯಾಗಿದ್ದರು. ಸಿ.ಡಬ್ಲ್ಯೂ.ಸಿ. ಅಧ್ಯಕ್ಷೆ ಪಿ.ಪಿ.ಶ್ಯಾಮಲಾದೇವಿ, ಕಾಸರಗೋಡು ಬಾರ್ ಅಸೋಸಿಯೇಶನ್ ಅಧ್ಯಕ್ಷ ಎ.ಸಿ.ಅಶೋಕ್ ಕುಮಾರ್, ಅಬಕಾರಿ ವಿಶೇಷದಳ ಸಿ.ಐ. ಪಿ.ಪಿ.ಜನಾರ್ದನನ್, ಜಿಲ್ಲಾಮಕ್ಕಳ ಸಂರಕ್ಷಣೆ ಅಧಿಕಾರಿ ಸಿ.ಎ.ಬಿಂದು, ಚೈಲ್ಡ್ ಲೈನ್ ಕೌನ್ಸಿಲರ್ ಆಯಿಷತ್ ಅಫೀದ, ಡಿ.ಎಲ್.ಎಸ್.ಎ. ವಿಭಾಗ ಅಧಿಕಾರಿ ಕೆ.ದಿನೇಶ, ಚಿನ್ಮಯಾ ವಿದ್ಯಾಲಯದ ಪ್ರಾಂಶುಪಾಲ ಪುಷ್ಪರಾಜ್ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಡಿ.ಎಲ್.ಎಸ್.ಎ. ಸದಸ್ಯರು, ಪಾರಾ ಲೀಗಲ್ ಸ್ವಯಂಸೇವಕರು ಮೊದಲಾದವರು ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries