ಡಮಾಸ್ಕಸ್: ಉತ್ತರ ಸಿರಿಯಾದಿಂದ ಟರ್ಕಿಯ ಸೇನಾ ಪಡೆಗಳನ್ನು ಹಿಂಪಡೆಯುವಲ್ಲಿ ರಾಜಕೀಯ ಮಾರ್ಗಗಳು ಒಂದೊಮ್ಮೆ ವಿಫಲವಾದರೆ, ಯುದ್ದವೊಂದೇ ನಮಗುಳಿದಿರುವ ಏಕೈಕ ಮಾರ್ಗ ಎಂದು ಸಿರಿಯಾ ಅಧ್ಯಕ್ಷ ಬಷರ್ ಅಲ್ - ಅಸದ್ ಎಚ್ಚರಿಕೆ ನೀಡಿದ್ದಾರೆ.
ಸಿರಿಯಾದ ನ್ಯಾಷನಲ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಬಷರ್ ಅಲ್ - ಅಸದ್, ಉತ್ತರ ಸಿರಿಯಾದಲ್ಲಿ ಸುರಕ್ಷಿತ ವಲಯ ನಿರ್ಮಿಸಲು ಟರ್ಕಿ- ರಷ್ಯಾ ಮಾಡಿಕೊಂಡಿರುವ ಇತ್ತೀಚಿನ ಒಪ್ಪಂದದಿಂದ, ಸಿರಿಯಾದ ಸೇನಾ ಸಮನ್ವಯದೊಂದಿಗೆ ಗಡಿ ಪ್ರದೇಶದಿಂದ ಕುರ್ದೀಷ್ ಹೋರಾಟಗಾರರನ್ನು ಹೊರಹಾಕಲು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.