ಕಾಸರಗೋಡು: ಕೇರಳ ತುಳು ಅಕಾಡೆಮಿ ವತಿಯಿಂದ ಡಿ.೧೩,೧೪ರಂದು ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ ನಡೆಯಲಿದೆ. ಕಾರ್ಯಕ್ರಮ ಅಂಗವಾಗಿ ದೇಶ-ವಿದೇಶಗಳ ತುಳುವರ ಸಂಗಮ, ಬಹುಭಾಷಾ ವಿಚಾರಸಂಕಿರಣ, ತುಳು ಕಲಾ-ಸಾಂಸ್ಕೃತಿಕ ಪ್ರದರ್ಶನ ಜರುಗಲಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕೇರಳ ತುಳು ಅಕಾಡೆಮಿಯ ಕಚೇರಿಯಲ್ಲಿ ನಡೆದ ಸಬೆಯಲ್ಲಿ ಈ ತೀರ್ಮಾಣ ಕೈಗೊಳ್ಳಲಾಗಿದೆ. ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ದಂಡನಾಧಿಕಾರಿ ಅಜೇಶ್ ಅವರ ಸಮಕ್ಷದಲ್ಲಿ ಸಭೆ ಜರುಗಿತು.
ಅಕಾಡೆಮಿಯ ತುಳು ಭವನ ನಿರ್ಮಾಣ ಅಂತಿಮ ಹಂತದಲ್ಲಿದ್ದು, ೨೦೨೦ ಜನವರಿ ತಿಂಗಳಮೊದಲ ವಾರದಲ್ಲಿ ಉದ್ಘಾಟನೆ ನಡೆಸುವ ಉದ್ದೇಶವಿದೆ. ಈ ಮೂಲಕ ಕಾಸರಗೋಡಿನ ತುಳುವರ ಬಲುದೊಡ್ಡ ಕನಸು ನನಸಾಗಲಿದೆ ಎಂದು ಸಭೆ ತಿಳಿಸಿದೆ.
ಕಾರ್ಯದರ್ಶಿ ವಿಜಯಕುಮಾರ್ ಪಾವಲ ಸ್ವಾಗತಿಸಿ, ಮುಂದಿನ ವರ್ಷದ ಮುಂಗಡಪತ್ರ ಮಂಡಿಸಿದರು. ಎರಡನೇ ಹಂತದಲ್ಲಿ ಕಲ್ಚರಲ್ ಥಿಯೇಟರ್, ಆವರಣಗೋಡೆ, ಪುರಾತನ ತುಳು ಸಂಸ್ಕೃತಿಗೆ ಸಂಬAಧಿಸಿದ ವಸ್ತು ಸಂಗ್ರಹಾಲಯ, ರಂಗಮAದಿರ, ತುಳು ಸಾಹಿತಿಗಳಿಗೆ ಪ್ರೋತ್ಸಾಹ, ಪುಸ್ತಕ ಪ್ರಕಟಣೆ, ತುಳು ಸಾಹಿತ್ಯ ಗೋಷ್ಠಿಗಳು, ತುಳು ಭಾಷಾ ಕಲಿಕಾ ಶಿಬಿರ, ಕಂಬಳ, ಗ್ರಾಮೋತ್ಸವಗಳಿಗೆ ಪ್ರೋತ್ಸಾಹ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತುಳು ಲಿಪಿ ಕಲಿಕಾ ಶಿಬಿರಗಳು, ತುಳು ಹಬ್ಬ ಹರಿದಿನಗಳ ಆಚರಣೆಗೆ ಯೋಜನೆ ಮುಂಗಡಪತ್ರದಲ್ಲಿ ಸಿದ್ಧಪಡಿಸಲಾಗಿದೆ. ಇವುಗಳಬಗ್ಗೆ ಚರ್ಚೆ ನಡೆಸಿ ಅಂಗೀಕಾರ ಮತ್ತು ಅನುದಾನಕ್ಕಾಗಿ ಸರಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಗಿದೆ.
ಡಿಸೆಂಬರ್ ತಿಂಗಳ ಕೊನೆಯಲ್ಲಿ ಬೆಳ್ಳೂರು ಪ್ರದೇಶದಲ್ಲಿ ದಿ.ವೆಂಕಟರಾಜ ಪುಣಿಂಚಿತ್ತಾಯ ಅವರ ಸಂಸ್ಮರಣೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.
ಫೊಟೋ ಶೀರ್ಷಿಕೆ: ತುಳು ಅಕಾಡೆಮಿ: ಕೇರಳ ತುಳು ಅಕಾಡೆಮಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಉಮೇಶ್ ಎಂ.ಸಾಲ್ಯಾನ್ ಮಾತನಾಡಿದರು.