ಬದಿಯಡ್ಕ: ಅಗಲ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಗುರುವಾರ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ನೆಹರೂರವರ ಕುರಿತು ಮಕ್ಕಳಿಂದ ಭಾಷಣ ಹಾಗೂ ಹಾಡುಗಳ ಗಾಯನ ನಡೆಯಿತು. ಗ್ರಾ.ಪಂ. ಸದಸ್ಯೆ ಶಾಂತಾ ಎಸ್. ಭಟ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಮೇಶ್ ಕೃಷ್ಣ ಹಾಗೂ ಮಾತೃಸಂಘದ ಅಧ್ಯಕ್ಷೆ ದಿವ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಪ್ರಶಸ್ತಿ ಪತ್ರ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬಳಿಕ ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಬಿ.ಆರ್.ಸಿ. ಯಿಂದ ಲಭಿಸಿದ ಉಲ್ಲಾಸ ಗಣಿತ ಕಿಟ್ ವಿತರಿಸಲಾಯಿತು.