HEALTH TIPS

ದಳಿಕುಕ್ಕಲ್ಲಿ ಗೋಪೂಜೆ


    ಉಪ್ಪಳ: ಶತಮಾನಗಳ ಹಿಂದೆ ಭಾರತದ ಸಾಂಬಾರ ಜೀನಸು ಎಲ್ಲಾ ದೇಶಗಳಿಗೆ ರಪ್ತಾಗುತ್ತಿತ್ತು. ಇದರಿಂದಾಗಿ ಭಾರತ ಪ್ರಬಲ ಆರ್ಥಿಕ ವ್ಯವಸ್ಠೆಯನ್ನು ಹೊಂದಿತ್ತು. ಎಲ್ಲಾ ದೇಶಗಳು ನಮ್ಮ ವಸ್ತುಗಳನ್ನು ಆಮದು ಮಾಡಲು ಇಲ್ಲಿ ಬೆಳೆಯುತ್ತಿದ್ದ ಅತ್ಯಂತ ಉತ್ಕೃಷ್ಠವಾದ ವಸ್ತುಗಳು  ಕಾರಣವಾಗಿದ್ದವು. ಇಲ್ಲಿನ ಗೋ ಆಧಾರಿತ ಕೃಷಿಯೇ ಸಾಂಬಾರ ಜೀನಸು ಮತ್ತು ಇತರ ವಸ್ತುಗಳ ಉತ್ತಮ ಗುಣಮಟ್ಟಕ್ಕೆ ಕಾರಣವಾಗಿದ್ದು, ಅಂದಿನ ನಮ್ಮ ದೇಶದ ಆರ್ಥಿಕ ಪ್ರಬಲತೆಗೆ ಗೋವೇ ಕಾರಣ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಮಿತಿಯ ಸದಸ್ಯ ರಾಮಚಂದ್ರ.ಯು. ಅವರು ಹೇಳಿದರು.
        ಅವರು ಬಾಯಾರು ದಳಿಕುಕ್ಕಿನ ಶ್ರೀ ದುರ್ಗಾಂಬಾ ಭಜನಾ ಮಂದಿರದ ಪರಿಸರದಲ್ಲಿ ಇತ್ತೀಚೆಗೆ ನಡೆದ ಭಾರತೀಯ ಕಿಸಾನ್ ಸಂಘದ ವತಿಯಿಂದ ಆಯೋಜಿತವಾದ ಗೋಪೂಜೆಯಲ್ಲಿ ಮಾತನಾಡಿದರು.
   ಇಂದಿನ ದಿನಗಳಲ್ಲಿ ನಾವು ಸ್ವದೇಶೀ ಗೋತಳಿಗಳನ್ನು ಸಾಕುವುದು ಹಾಗೂ ಅದರ ಉತ್ಪನ್ನಗಳ ಉಪಯೋಗ ಕಡಿಮೆ ಮಾಡುತ್ತಿದ್ದೇವೆ. ಆದರೆ ಸ್ವದೇಶೀ ಗೋತಳಿಗಳ ಹಾಲು ಉತ್ಕೃಷ್ಠವಾಗಿತ್ತು.ಹಾಲಲ್ಲಿ ಎ೨ ಎಂಬ ಅಂಶವಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತುಗೊಂಡಿದೆ. ಜೊತೆಗೆ ಅದರ ಗೊಬ್ಬರ ಕೃಷಿಕೆ ಪೂರಕವಾಗಿದ್ದು ಉತ್ತಮ ಗುಣದ ಸಾವಯವ ಕೃಷಿ ಉತ್ಪನ್ನಗಳನ್ನು ಬೆಳೆಸಲು ಅತ್ಯಂತ ಸಹಾಯಕಾರಿಯಾಗಿದೆ. ಇಂತಹ ಗೋವಿನ ಹತ್ಯೆಯನ್ನು ನಿಷೇಧ ಮಾಡಬೇಕು ಎಂಬುದು ನಮ್ಮೆಲ್ಲರ ಆಗ್ರಹವಾಗಿದೆ ಹಾಗೂ ಸ್ವದೇಶಿ ಗೋವಿನ ರಕ್ಷಣೆ ಹೊಣೆಯನ್ನು ಮಾಡುವ ಸಂಕಲ್ಪವನ್ನು ನಾವೆಲ್ಲ ಮಾಡೋಣ ಎಂದು ಹೇಳಿದರು.
     ಕಾರ್ಯಕ್ರಮದ ಆರಂಭದಲ್ಲಿ ಗೋವಿಗೆ ಶ್ರೀ ದುರ್ಗಾಂಬಾ ಭಜನಾ ಸದಸ್ಯ ನಾರಾಯಣ ಗೋಳಿಮೂಲೆ ಅವರು ಪೂಜೆ ನಡೆಸಿ ಗೋ ಗ್ರಾಸ ನೀಡಿದರು. ಬಳಿಕ ಪಾಲ್ಗೊಂಡವರೆಲ್ಲರೂ  ಗೋವಿಗೆ ಪುಷ್ಪಾರ್ಚನೆ ಮಾಡಿ ಗೋಗ್ರಾಸ ನೀಡಿ ಗೋವನ್ನು ಪೂಜಿಸಿದರು. ಕಾರ್ಯಕ್ರಮದ ಕೊನೆಗೆ ಪ್ರಸಾದ ವಿತರಣೆ ನಡೆಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries