ಕಾಸರಗೋಡು: ಕನ್ನಡ ಭಾಷಾಭಿಮಾನಿಗಳ ಸಮಾಲೋಚನಾ ಸಭೆ ಶನಿವಾರ ಬೀರಂತಬೈಲಿನ ಕನ್ನಡ ಮಾಧ್ಯಮ ಅಧ್ಯಾಪಕರ ಭವನದಲ್ಲಿ ಜರುಗಿತು. ಪ್ರಸನ್ನ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿಎಸ್‌ಸಿ ಕನ್ನಡಮಾಧ್ಯಮ ಪರೀಕ್ಷಾರ್ಥಿಗಳಿಗೆ ನಡೆಸಿದ ವಂಚನೆ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕನ್ನಡ ಹೋರಾಟ ಸಮಿತಿ ಮುಖಂಡರಾದ ಮಹಾಲಿಂಗೇಶ್ವರ ಭಟ್, ಭಾಸ್ಕರ ಕಾಸರಗೋಡು, ತಾರಾನಾಥ ಮಧೂರು, ಡಾ. ಯುಯ.ಮಹೇಶ್ವರಿ, ರಾಮಮೂರ್ತಿ, ವಇಶ್ವನಾಥ ರಾವ್, ಗಂಗಾಧರ ಯಾದವ್, ಸುಂದರ ಬಾರಡ್ಕ, ಪಿಎಸ್‌ಸಿ ಪರೀಕ್ಷಾರ್ಥಿಗಳು ಉಪಸ್ಥಿತರಿದ್ದರು. ಕಾನೂನು ಹೋರಾಟದಲ್ಲಿ ಪರೀಕ್ಷೆ ಬರೆದಿರುವ ಎಲ್ಲ ಅಭ್ಯರ್ಥಿಗಳ ಸಹಿತ ಕನ್ನಡಿಗರು ಎಲ್ಲ ರೀತಿಯ ಸಹಕಾರ ನೀಡುವಂತೆ ಮನವಿಮಾಡಿಕೊಳ್ಳಲಾಯಿತು.
ಮಂಜೇಶ್ವರ, ಕಾಸರಗೋಡು ಹಾಗೂ ಹೊಸದುರ್ಗ ತಾಲೂಕಿನ ವಿವಿಧ ಕನ್ನಡ ಮಾಧ್ಯಮ ಶಾಳೆಗಳಲ್ಲಿ ಗಣಿತ, ಸಾಮಾಜಿಕ ವಿಜ್ಞಾನ ಮುಂತಾದ ವಿಷಯಗಳಿಗೆ ಬೋಧನೆ ಮಾಡಲು ಕನ್ನಡ ಅರಿಯದ ಶಿಕ್ಷಕರ ನೇಮಕಾತಿ ವಿರುದ್ಧ ಕನ್ನಡ ಹೋರಾಟ ಸಮಿತಿ ವತಿಯಿಂದ ಕನ್ನಡ ಮಕ್ಕಳ ಪೋಷಕರು, ರಕ್ಷಕ-ಶಿಕ್ಷಕ ಸಂಘ ಹಾಗೂ ಕನ್ನಡ ಪರ ಸಂಘಟನೆಗಳ ಸಹಯೋಗದೊಂದಿಗೆ ನಡೆಸಿರುವ ಹೋರಾಟದಿಂದ ತಾತ್ಕಾಲಿಕ ಪರಿಹಾರ ಲಭಿಸಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಯಿತು.
ಕಾರ್ಯದರ್ಶಿ ವಿಷ್ಣು ಪ್ರಕಾಶ್ ಮುಳ್ಳೇರಿಯ ಸ್ವಾಗತಿಸಿ, ಪ್ರಸನ್ನ ಕುಮಾರ್ ವಂದಿಸಿದರು.