ಕಾಸರಗೋಡು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಪವಿತ್ರ ಕಾರ್ತಿಕ ಮಾಸದ ಪರ್ವದಿನವಾದ ಸಪ್ತಮಿಯಂದು ವಿಶ್ವರೂಪ ದರ್ಶನದ ವಿಶೇಷ ದೀಪಾರಾಧನೆ ವೈಭವದಿಂದ ನಡೆಯಿತು. ದೇಗುಲದ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಕೈಗೊಳ್ಳಲಾಗಿತ್ತು.
ಸಂಜೆ ಶ್ರೀ ವರಲಕ್ಷ್ಮಿ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನೆ ನಡೆಯಿತು. ಬಳಿಕ ಪ್ರಾರ್ಥನೆ, ದೀಪ ಪ್ರಜ್ವಲನೆ, ರಾತ್ರಿ ಪೂಜೆ, ಪ್ರಸಾದ ವಿತರಣೆ, ಬಳಿಕ ಸಮಾರಾಧನೆ ಜರಗಿತು. ಶ್ರೀ ಕ್ಷೇತ್ರದ ಗರ್ಭಗುಡಿ ಮೊದಲ್ಗೊಂಡು ಪೂರ್ತಿ ದೀಪ ಪ್ರಜ್ವಲನೆ ಮಾಡಲಾಗಿತ್ತು.
ಕಾರ್ತಿಕ ಮಾಸದ ಲಕ್ಷ ಪ್ರದಕ್ಷಿಣೆ ಕಾರ್ಯಕ್ರಮವೂ ದೇಗುಲದಲ್ಲಿ ಪ್ರಾರಂಭ ಗೊಂಡಿದ್ದು ನ.೮ರ ವರೆಗೆ ನಡೆಯಲಿದೆ.