ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ನ.೩ ರಿಂದ ಆರಂಭಗೊAಡಿರುವ ಶ್ರೀಮದ್ಭಾಗವತ ಸಪ್ತಾಹ ಯಜ್ಞದ ಅಂಗವಾಗಿ ನಾಲ್ಕನೇ ದಿನವಾದ ಬುಧವಾರ ಬೆಳಿಗ್ಗೆ ಗಣಪತಿ ಹವನ, ಹರಿನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ, ಗ್ರಂಥ ನಮಸ್ಕಾರ, ಶ್ರೀಮದ್ಭಾಗವತ ಪಾರಾಯಣ ಮತ್ತು ಪ್ರವಚನಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನ ಪ್ರಸಾದ, ಭಾಗವತ ಪಾರಾಯಣ-ಪ್ರವಚನಗಳು ಮುಂದುವರಿಯಿತು. ಪಾರಾಯಣ-ಪ್ರವಚನದಲ್ಲಿ ಭರತನ ಕಥೆ, ರಾಹುಗುಣ ಸಂವಾದ, ಅಜಾಮಿಳ ಮೋಕ್ಷ, ವೃತ್ರಾಸುರ ಕಥೆ, ಚಿತ್ರಕೇತುವಿನ ಕಥೆ, ಪ್ರಹ್ಲಾದ ಚರಿತ್ರೆಗಳನ್ನು ಉಲ್ಲೇಖಿಸಲಾಯಿತು. ಪ್ರಧಾನವಾಗಿ ನರಸಿಂಹಾವತಾರದ ಸಮಗ್ರ ವಿವರಣೆ ನಡೆಯಿತು. ಸಂಜೆ ವಿಶೇಷವಾದ ವಿದ್ಯಾಗೋಪಾಲ ಪೂಜೆ ಹಾಗೂ ನಾಮ ಸಂಕೀರ್ತನೆ, ದೀಪಾರಾಧನೆಗಳು ನೆರವೇರಿದವು. ನ.೧೦ ರಂದು ಸಪ್ತಾಹ ಯಜ್ಞ ಸಮಾರೋಪಗೊಳ್ಳಲಿದೆ.