ಕುಂಬಳೆ: ಶ್ರೀಕ್ಷೇತ್ರ ಕಟೀಲು ಯಕ್ಷಗಾನ ಮೇಳಗಳ ಏಲಂ ವಿಚಾರದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಮತ್ತು ಜನಪ್ರಿಯ ಭಾಗವತ ಪಟ್ಲ ಸತೀಶ ಶೆಟ್ಟಿ ಯವರನ್ನು ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ಪಟ್ಲ ಪೌಂಡೇಶನ್ ಕುಂಬಳೆ ಘಟಕದ ವತಿಯಿಂದ ಕುಂಬಳೆ ಠಾಣೆಯಲ್ಲಿ ಠಾಣ ಅಧಿಕಾರಿಗಳಿಗೆ ಕಾನೂನು ಕ್ರಮ ಜರುಗಿಸುವಂತೆ ಶುಕ್ರವಾರ ಮನವಿಯನ್ನು ಸಲ್ಲಿಸಲಾಯಿತು.
ಘಟಕದ ಪ್ರಧಾನ ಕಾರ್ಯದರ್ಶಿ ಸುಕೇಶ್ ಭಂಡಾರಿ ಕಿದೂರು, ಸಂಚಾಲಕ ದಿವಾಣ ಶಿವಶಂಕರ ಭಟ್, ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಸದಸ್ಯರಾದ ನಿಶು ಆಚಾರ್ಯ, ಸುಜನ ಶಾಂತಿಪಳ್ಳ, ಪ್ರವೀಣ್ ಗಟ್ಟಿ ಮಳಿ, ಚರಣರಾಜ್ ಕಂಚಿಕಟ್ಟೆ ಹಾಗೂ ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಅವರು ಉಪಸ್ಥಿತರಿದ್ದರು.