ಕಾಸರಗೋಡು: ಪರಿಸರ ಸಂರಕ್ಷಣೆಯ ಉದ್ದೇಶದಿಂದ ಹರಿತ ಕೇರಳಂ ಮಿಷನ್ ಜಿಲ್ಲಾ ಮಿಷನ್ ನ ಯೋಜನೆಗಳಾದ "ಕುಪ್ಪಿ(ಕಾಸರಗೋಡು ಯೂನಿಕ್ ಪೆÇ್ರೀಗ್ರಾಂ ಫಾರ್ ಪ್ಲಾಸ್ಟಿಕ್ ಬಾಟಲ್ ಫ್ರೀ ಯಜ್ಞಂ)" ಅಂಗವಾಗಿ ಸಂಗ್ರಹಿಸಿದ ಪ್ಲಾಸ್ಟಿಕ್ ಬಾಟಲಿಗಳನ್ನು ಮತ್ತು "ಪೆನ್ ಫ್ರೆಂಡ್" ಯೋಜನೆ ಮೂಲಕ ಸಂಗ್ರಹಿಸಿದ ಬಳಕೆಯಿಲ್ಲದ ಪೆನ್ ಗಳನ್ನು ಹಸಾಂತರಿಸುವ ಕಾರ್ಯಕ್ರಮ ಚೆರ್ಕಳ ಮಾರ್ತೋಮಾ ಕಿವುಡರ ವಿದ್ಯಾಲಯದಲ್ಲಿ ಜರುಗಿತು.
ಚೆಂಗಳ ಗ್ರಾಮಪಂಚಾಯತ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸುಮಾರು 5 ಸಾವಿರ ಬಾಟಲಿ ಮತ್ತು 30 ಕಿಲೋ ಪೆನ್ ಗಳನ್ನು ಅಂಗೀಕೃತ ಗುಜರಿ ವ್ಯಾಪಾರಿಗಳಿಗೆ ಹಸ್ತಾಂತರಿಸಲಾಯಿತು. ಈ ಸಂಬಂಧ ಕಾರ್ಯಕ್ರಮವನ್ನು ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷ ಷಾಹಿನಾ ಸಲೀಂ ಉದ್ಘಾಟಿಸಿದರು. ಸದಸ್ಯೆ ಸುಫೈಝಾ ಮುನೀರ್ ಅಧ್ಯಕ್ಷತೆ ವಹಿಸಿದ್ದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರ್ಹಹ್ಮಣ್ಯನ್ ತ್ಯಾಜ್ಯ ಪರಿಷ್ಕರಣೆ ಸಂಬಂಧ ಜಾಗೃತಿ ತರಗತಿ ನಡೆಸಿದರು. ಚೆಮಗಳ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಇ.ಶಾಂತಾಕುಮಾರಿ ಟೀಚರ್, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಹಾಜಿರಾ ಮಹಮ್ಮದ್ ಕುಂಞÂ, ಸದಸ್ಯರಾದ ಎನ್.ಎ.ತಾಹಿರ್, ವಿ.ಸದಾನಂದನ್, ಎ.ಮಮ್ಮಿಞÂ, ಮಹಮ್ಮದ್ ತೈವಳಪ್, ಎಂ.ಸಿ.ಫೈಝಲ್, ಸಫಿಯಾ ಮಹಮ್ಮದ್ ಉಪಸ್ಥಿತರಿದ್ದರು.