ಬದಿಯಡ್ಕ: ತಮಿಳುನಾಡಿನ ಚೆನೈಯಲ್ಲಿ ಜರಗಿದ ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆಯ 5ನೇ ಹಂತದಲ್ಲಿ ಸೃಜನ್ ಕೇಶವ ಚಿನ್ನದ ಪದಕವನ್ನು ಪಡೆದಿರುತ್ತಾನೆ. ಬದಿಯಡ್ಕದ ಪದ್ಮಶ್ರೀ ಟ್ಯುಟೋರಿಯಲ್‍ನಲ್ಲಿ ಕಾರ್ಯಾಚರಿಸುತ್ತಿರುವ ಬ್ರೈನ್ ಒ ಬ್ರೈನ್ ಸಂಸ್ಥೆಯ ಅಧ್ಯಾಪಿಕೆಯರಾದ ಮಧುರಾ ಹೆಗಡೆ ಹಾಗೂ ಅಶ್ವಿನಿ ಪಟ್ಟಾಜೆಯವರಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಚಂಬಲ್ತಿಮಾರು ಸುಬ್ರಹ್ಮಣ್ಯ ಭಟ್-ಜ್ಯೋತಿ ದಂಪತಿಗಳ ಪುತ್ರ, ಬದಿಯಡ್ಕ ಚಿನ್ಮಯ ವಿದ್ಯಾಲಯದ 5ನೇ ತರಗತಿಯ ವಿದ್ಯಾರ್ಥಿ.