ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗು ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಕಾಸರಗೋಡು, ಕೂಡ್ಲು ಶ್ಯಾನುಭೋಗ್ ಸಂಗೀತ ಟ್ರಸ್ಟ್ ಬೆಂಗಳೂರು ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.೨೪ ಭಾನುವಾರ ಒಂದು ದಿನದ ಕೇರಳ ರಾಜ್ಯ ದ್ವಿತೀಯ ದಾಸ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಉದ್ಘಾಟನಾ ಸಮಾರಂಭದ ಬಳಿಕ `ಭಕ್ತಿ -ಭಾವಗಾನ' ಶಿಬಿರ - ಕಮ್ಮಟವು ಸುಪ್ರಸಿದ್ಧ ಕಲಾವಿದರಾದ ವೃಂದಾ ಎಸ್.ರಾವ್ ಹಾಗು ವೈಷ್ಣವ್ ರಾವ್ ಅವರ ನೇತೃತ್ವದಲ್ಲಿ ನಡೆಯಲಿದೆ.
ಅಪರಾಹ್ನ ೩ ರಿಂದ `ಗಾನ ವೈಭವ' ಕಾರ್ಯಕ್ರಮವು ನಾಡಿನ ಸುಪ್ರಸಿದ್ಧ ಕಲಾವಿದರಾದ ವೃಂದಾ ಎಸ್.ರಾವ್ ಹಾಗು ವೈಷ್ಣವ್ ರಾವ್ ತಂಡದವರಿOದ ನಡೆಯಲಿದೆ. ಕಾಸರಗೋಡು ಜಿಲ್ಲೆಯ ಸುಮಾರು ೧೦೦ ದಾಸ ಸಂಕೀರ್ತನಕಾರರಿoದ ಸಮೂಹ ದಾಸ ಸಂಕೀರ್ತನ ಗಾಯನ ಮತ್ತು ಭಾವ ಗೀತಾ ಗಾಯನ ನಡೆಯುವುದು.
ಕಾಸರಗೋಡು ಜಿಲ್ಲೆಯ ೫೦ ಭಜನಾ ಮಂಡಳಿಗಳಿಗೆ ಭಾಗವಹಿಸುವ ಅವಕಾಶ ನೀಡಲಾಗಿದೆ. ಭಜನಾ ತಂಡಗಳಲ್ಲಿ ಕನಿಷ್ಠ ೧೦ ರಿಂದ ೧೫ ರ ತನಕ ಸದಸ್ಯರು ಇರಬೇಕು. ಹರಿದಾಸ ಸಾಹಿತ್ಯದ ಪ್ರಚಾರ ಹಾಗು ಸಾಂಪ್ರದಾಯಿಕ ಭಜನೆಯ ಪುನರುಜ್ಜೀವನದ ಉದ್ದೇಶವನ್ನಿರಿಸಿಕೊಂಡು ವರ್ಷಂಪ್ರತಿ ಕೇರಳ ರಾಜ್ಯ ದಾಸ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲು ತೀರ್ಮಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿವರಾಮ ಕಾಸರಗೋಡು, ಮೊ.೯೪೪೮೫೭೨೦೧೬ ಸಂಪರ್ಕಿಸಬಹುದು.