ಕಾಸರಗೋಡು: ದೇಶದ ಏಕತೆ ಮತ್ತು ಅಖಂಡತೆಗೆ ಧಕ್ಕೆಯುಂಟುಮಾಡುವ'ದೇಶಿ'ಎಂಬ ನಾಟಕವನ್ನು ರಾಜ್ಯ ಶಾಲಾ ಕಲೋತ್ಸವದಲ್ಲಿ ಪ್ರದರ್ಶಿಸದಿರುವಂತೆ ಹಿಂದೂ ಐಕ್ಯವೇದಿ ರಾಜ್ಯಸಮಿತಿ ಅಧ್ಯಕ್ಷೆ ಕೆ.ಪಿ ಶಶಿಕಲಾ ಟೀಚರ್ ಆಗ್ರಹಿಸಿದ್ದಾರೆ.
ಅವರು ಕಾಸರಗೋಡಿನಲ್ಲಿ ಮಂಗಳವಾರ ನಡೆದ ಹಿಂದೂ ಐಕ್ಯವೇದಿ ಜಿಲ್ಲಾ ಕಾರ್ಯಕಾರಿ ಸಮಿತಿ ಸಂಗಮ ಉದ್ಘಾಟಿಸಿ ಮಾತನಾಡಿದರು. ಶಬರಿಮಲೆಯ ಆಚಾರ ಅನುಷ್ಠಾನವನ್ನು ಸಂರಕ್ಷಿಸಲು ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧವಿದೆ. ಆಚಾರ ವಿಶ್ವಾಸಿಗಳ ಹೋರಾಟದಲ್ಲಿ ಹಿಂದೂ ಐಕ್ಯವೇದಿ ಕೊನೆವರೆಗೂ ಜತೆಗಿರಲಿದೆ. ಆಕ್ಟಿವಿಸ್ಟ್ ಆಗಿ ಗುರುತಿಸಿಕೊಂಡಿರುವ ಬಿಂದು ಅಮ್ಮಿಣಿಗೆ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಅವಕಾಶಮಾಡಿಕೊಡುವಂತೆ ಎಸ್‍ಎಫ್‍ಐ ಕೋಯಿಕ್ಕೋಡ್ ಜಿಲ್ಲೆಯಲ್ಲಿ ತರಗತಿ ಬಹಿಷ್ಕರಿಸಿ ಧರಣಿ ನಡೆಸಿದ್ದರೆ, ಈ ಬಗ್ಗೆ ಸಿಪಿಎಂ ತನ್ನ ನಿಲುವು ವ್ಯಕ್ತಪಡಿಸುವಂತೆ ಆಗ್ರಹಿಸಿದರು.
ಹಿಂದೂ ಐಕ್ಯವೇದಿ ಜಿಲ್ಲಾಧ್ಯಕ್ಷ ಗೋವಿಂದನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯಸಮಿತಿ ಸದಸ್ಯ ಕುಂಟಾರು ರವೀಶ ತಂತ್ರಿ, ಹಿಂದೂ ಐಕ್ಯವೇದಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಬಾಬು, ಕಾರ್ಯದರ್ಶಿ ಎ.ಶ್ರೀಧರನ್, ಪ್ರಧಾನ ಕಾರ್ಯದರ್ಶಿ ಕೆ.ಪಿ ಹರಿದಾಸ್, ಎ.ಕರುಣಾಕರನ್, ಎಸ್.ಪಿ ಶಾಜಿ, ರಾಜನ್ ಮುಳಿಯಾರ್, ಕುಞÂರಾಂನ್ ಕೇಳೋತ್, ವಾಮನ ಆಚಾರ್ಯ, ಮಹಿಳಾ ಸಂಘಟನೆ ಅಧ್ಯಕ್ಷೆ ಸತಿ ಕೋಡೋತ್, ಕಾರ್ಯದರ್ಶಿ ವಸಂತಿಕೃಷ್ಣ ಉಪಸ್ಥಿತರಿದ್ದರು.