ಮುಳ್ಳೇರಿಯ: ಕಾರಡ್ಕ ಬ್ಲಾಕ್ ಪಂಚಾಯತಿಯಲ್ಲಿ 2019-20ನೇ ವರ್ಷದ ಯೋಜನೆಯಲ್ಲಿ ಅಳವಡಿಸಿ ಮಹಿಳಾ ಗುಂಪುಗಳಿಗೆ ಸ್ವೋದ್ಯೋಗ ಯೋಜನೆ ಪ್ರಕಾರ ಉತ್ಪಾದೆ ವಲಯದಲ್ಲಿ ಕಿರು ಉದ್ದಿಮೆ ಆರಂಭಿಸುವ ನಿಟ್ಟಿನಲ್ಲಿ ಮಹಿಳಾ ಗುಂಪುಗಳಿಂದ ಅರ್ಜಿ ಕೋರಲಾಗಿದೆ.
ಕನಿಷ್ಠ 5 ಮಹಿಳಾ ಗುಂಪುಗಳು ಸೇರಿರುವ, ಗ್ರೇಡ್ ನಡೆಸದೇ ಇರುವ ಗುಂಪಿಗೆ ಸೇ 85(ಗರಿಷ್ಠ 3 ಲಕ್ಷ ರೂ.) ಸಾಲ ಕೇಂದ್ರಿತ ಸಬ್ಸಿಡಿ ನೀಡುವ ಯೋಜನೆ ಇದಾಗಿದೆ. ರೆಡಿಮೇಡ್ ಗಾರ್ಮೆಟ್ಸ್, ಆಹಾರ ಪರಿಷ್ಕರಣೆ, ಬ್ಯಾಗ್ ನಿರ್ಮಾಣ ಇತ್ಯಾದಿ ಉತ್ಪಾದನೆ ವಲಯದಲ್ಲಿ ಆರಂಭಿಸುವ ಉದ್ದಿಮೆಗಳಲ್ಲಿ ಆಸಕ್ತರಾದವರು ಕಾರಡ್ಕ ಬ್ಲಾಕ್ ಪಂಚಾಯಯತಿಗೆ ಅರ್ಜಿ ಸಲ್ಲಿಸಬೇಕು. ಗುಂಪಿನ ಸದಸ್ಯರು 18ರಿಂದ 60 ವರ್ಷ ಪ್ರಾಯದವರಾಗಿದ್ದು, ಕನಿಷ್ಠ ಮೂರು ವರ್ಷಗಳಿಂದ ಬ್ಲಾಕ್ ವ್ಯಾಪ್ತಿಯ ಶಾಶ್ವತ ನಿವಾಸಿಗಳಾಗಿರಬೇಕು. ಮಾಹಿತಿಗೆ ಕಾರಡ್ಕ ಬ್ಲಾಕ್ ಪಂಚಾಯತಿ ಕಚೇರಿ ಅಥವಾ ಬ್ಲಾಕ್ ಉದ್ದಿಮೆ ಅಭಿವೃದ್ಧಿ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 04994-260249, 9188127212, 9947248662 ಸಂಪರ್ಕಿಸಬಹುದು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.