HEALTH TIPS

ಶಬರಿಮಲೆಗೆ ಆಗಮಿಸುವ ಯುವತಿಯರಿಗೆ ಸರ್ಕಾರದ ವಿಶೇಷ ರಕ್ಷಣೆ ಇಲ್ಲ-ಮುಜರಾಯಿ ಖಾತೆ ಸಚಿವ ಸ್ಪಷ್ಟನೆ

      ತಿರುವನಂತಪುರ: ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಅಂತಿಮ ತೀರ್ಪು ಇನ್ನೂ ಹೊರಬೀಳಬೇಕಾಗಿರುವುದರಿಂದ, ಶಬರಿಮಲೆಗೆ ಆಗಮಿಸುವ ಯುವತಿಯರಿಗೆ ಸರ್ಕಾರ ಪ್ರತ್ಯೇಕ ಸಂರಕ್ಷಣೆ ಒದಗಿಸಲು ಸಾಧ್ಯವಿಲ್ಲ ಎಂದು ಮುಜರಾಯಿ ಖಾತೆ ಸಚಿವ ಕಡಗಂಪಳ್ಳಿ ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಸಂರಕ್ಷಣೆ ನೀಡುವ ಭರವಸೆಯೊಂದಿಗೆ ಯಾವೊಬ್ಬ ಯುವತಿಯೂ ಶಬರಿಮಲೆಗೆ ಆಗಮಿಸಬೇಕಾಗಿಲ್ಲ. ಶಬರಿಮಲೆ, ತಮ್ಮ ಬಲ ಪ್ರದರ್ಶನಕ್ಕಿರುವ ತಾಣವಲ್ಲ ಎಂಬುದನ್ನು ಹೋರಾಟಗಾರ್ತಿಯರು ಮನಗಾಣಬೇಕು. ಸರ್ಕಾರ ಎಂದಿಗೂ ಶಬರಿಮಲೆ ವಿಶ್ವಾಸಿಗಳ ಜೊತೆಗಿರಲಿದೆ. ಶಬರಿಮಲೆಯಲ್ಲಿ ಆಕ್ಟಿವಿಸ್ಟ್ಗಳು ಹಾಗೂ ಕೆಲವು ಮಾಧ್ಯಮಗಳು ಪರಿಸ್ಥಿತಿಯನ್ನು ಜಟಿಲಗೊಳಿಸುತ್ತಿರುವುದಾಗಿ ಕಡಗಂಪಳ್ಳಿ ದೂರಿದ್ದಾರೆ.
      ಮಂಡಲ ಮಹೋತ್ಸವಕ್ಕಾಗಿ ಶಬರಿಮಲೆ ಗರ್ಭಗುಡಿ ಬಾಗಿಲು ನವೆಂಬರ್ ೧೬ರಂದು ಸಾಯಂಕಾಲ ೫ಕ್ಕೆ ತೆರೆಯಲಿದ್ದು, ಈ ಮೂಲಕ ಶಬರಿಮಲೆಯ ಈ ವರ್ಷದ ಪವಿತ್ರ ಯಾತ್ರೆ ಆರಂಭಗೊಳ್ಳಲಿದೆ. ಶಬರಿಮಲೆ ದರ್ಶನಕ್ಕಾಗಿ ಆನ್‌ಲೈನ್ ಮೂಲಕ ೩೬ಮಂದಿ ಮಹಿಳೆಯರು ಈಗಾಗಲೇ ಬುಕ್ಕಿಂಗ್ ನಡೆಸಿದ್ದಾರೆ. ಶಬರಿಮಲೆಗೆ ಯುವತಿಯರು ಆಗಮಿಸಿದಲ್ಲಿ, ಕಳೆದ ವರ್ಷದಂತೆ ಈ ಬಾರಿ ವಿಶೇಷ ಭದ್ರತೆ  ಒದಗಿಸದಿರಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೆ ಸನ್ನಿದಾನದಲ್ಲಿ ಕರ್ತವ್ಯಕ್ಕೆ ಮಹಿಳಾ ಪೊಲೀಸರನ್ನು ನೇಮಿಸದಿರಲೂ ತೀರ್ಮಾನ ಕೈಗೊಳ್ಳಲಾಗಿದೆ. ಸನ್ನಿದಾನ ಹೊತರುಪಡಿಸಿ ಉಳಿದ ಎಲ್ಲಾ ಕಡೆ ಮಹಿಳಾ ಪೊಲೀಸರು ಕರ್ತವ್ಯದಲ್ಲಿರಲಿದ್ದಾರೆ. ತಮಿಳ್ನಾಡಿನ ಮನಿದಿ ಸಂಘಟನೆ ಸದಸ್ಯೆಯರು ಹಗೂ ಮಹಿಳಾ ಹೋರಾಟಗಾರ್ತಿ ತೃಪ್ತೀ ದೇಸಾಯಿ ಶಬರಿಮಲೆಗೆ ಭೇಟಿ ನೀಡುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ಯುವತಿಯರಿಗೆ ಸರ್ಕಾರ ಪ್ರತ್ಯೇಕ ಪೊಲೀಸ್ ಸಂರಕ್ಷಣೆ ಒದಗಿಸಿರುವುದು ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries