ಕಾಸರಗೋಡು: ದೌರ್ಜನ್ಯಕ್ಕೊಳಗಾಗುವ ಹೆಣ್ಣುಮಕ್ಕಳಿಗೆ ಅಗತ್ಯ ಸಹಾಯ ಒಂದೇ ಸೂರಿನಡಿ ಲಭಿಸುವ ನಿಟ್ಟಿನಲ್ಲಿ 'ಸಖಿ'ಎಂಬ ಹೆಸರಿನ ವನ್ ಸ್ಟಾಪ್ ಸೆಂಟರ್ ವಿದ್ಯಾನಗರದಲ್ಲಿರುವ ಕುಟುಂಬಕಲ್ಯಾಣ ಉಪ ಕೇಂದ್ರದಲ್ಲಿ ಚಟುವಟಿಕೆ ಆರಂಭಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿರುವ ಈ ಸೆಂಟರ್ ದಿನದ 24 ತಾಸೂ ಚಟುವಟಿಕೆನಡೆಸಲಿದೆ.ಮಳೆಯರು ಅಥವಾ ಮಕ್ಕಳುಯಾವುದೇ ರೀತಿಯ ದೈಹಿಕ, ಮಾನಸಿಕ ದೌರ್ಜನ್ಯಕ್ಕೊಳಗಾದರೆ ತಾತ್ಕಾಲಿಕ ಆಸರೆ, ಚಿಕಿತ್ಸೆ, ಕಾನೂನಿನ ಸಹಾಯ, ಪೆÇಲೀಸ್ ಸೇವೆ, ಕೌನ್ಸೆಲಿಂಗ್ ಸಹಿತ ಸೇವೆಗಳು ಇಲ್ಲಿ ಲ¨ಭ್ಯವಿರಲಿದೆ. ಶಾರೀರಿಕ, ಮಾನಸಿಕ, ಲೈಂಗಿಕ ದೌರ್ಜನ್ಯಕ್ಕೊಳಗಾದವರು ನೇರವಾಗಿ 'ಸಖಿ' ಸೆಂಟರ್ ಗೆ ಹಾಜರಾಗಬಹುದು ಅಥವಾ ಮಹಿಳಾಸಹಾಯ ವಾಣಿ(1091), ನಿರ್ಭಯ ಟ್ರೋಲ್(1800 425 1400),ಮಿತ್ರ(181), ಚೈಲ್ಡ್ ಲೈನ್(1098) ಇವುಗಳಲ್ಲಿ ಯಾವುದಾದರೂ ಒಂದು ನಂಬ್ರಕ್ಕೆ ಕರೆಮಾಡಿ ಸೇವೆ ಪಡೆಯಬಹುದಾಗಿದೆ.
ಮಹಿಳಾ ಸಂಕೀರ್ಣ ಶೀಘ್ರದಲ್ಲಿ ಆರಂಭ:
ರಾಜ್ಯದ ಪ್ರಪ್ರಥಮ ಮಹಿಳಾ ಸಂಕೀರ್ಣ(ವುಮನ್ ಕಾಂಪ್ಲೆಕ್ಸ್) ನಗರದ ಅಣಂಗೂರಿನಲ್ಲಿ ಶೀಘ್ರ ಆರಂಭಗೊಳ್ಳಲಿದೆ. ಪತಿ ತೊರೆದು ಹೋದ, ಪುಟ್ಟ ಮಕ್ಕಳೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿರುವ ಹೆಣ್ಣುಮಕ್ಕಳಿಗಾಗಿ ಒಂದು ಬೆಡ್ ರೂಂ ಸಹಿತದ ಹತ್ತು ಫ್ಲ್ಯಾಟ್‍ಗಳು, ದೌರ್ಜನ್ಯಕ್ಕೊಳಗಾದ ಮಹಿಳೆಗೆ ತಾತ್ಕಾಲಿಕ ಆಸರೆ ಕೇಂದ್ರವಾಗಿರುವ ಸಖಿ ವನ್ ಸ್ಟಾಪ್‍ಸೆಂಟರ್, ದೂರದೂರಿಂದ ಸಂದರ್ಶನ, ಪರೀಕ್ಷೆ ಸಹಿತ ಅಗತ್ಯಗಳಿಗೆ ಆಗಮಿಸುವ ಜಿಲ್ಲೆಯ ಹೊರಭಾಗಗಳ ಮಹಿಳೆಯರಿಗೆ ಒಂದು ರಾತ್ರಿ ತಂಗಬಹುದಾದ ರೀತಿಯ ಯೋಜನೆಗಳನ್ನು ಒಳಪಡಿಸಿ ವುಮೆನ್ ಕಾಂಪ್ಲೆಕ್ಸ್ ನಿರ್ಮಿಸಲಾಗುವುದು.
ಯೋಜನೆಯರೂಪುರೇಷೆ ಸಿದ್ಧಪಡಿಸಿ, ನೋಂದಣಿ ಚಟುವಟಿಕೆಗಳು ಪೂರ್ಣಗೊಂಡಿರುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ವರದಕ್ಷಿಣೆ ವಿರೋಧಿ ವಿಚಾರಸಂಕಿರಣ:
ವರದಕ್ಷಿಣೆ ವಿರೋಧಿ ಜಿಲ್ಲಾ ಮಟ್ಟದ ವಿಚಾರಸಂಕಿರಣ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಜರುಗಿತು. ವರದಕ್ಷಿಣೆ ನಿಷೇಧ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಂರಕ್ಷಣಾ ಕಚೇರಿ, ಕಾಸರಗೋಡು ಸರ್ಕಾರಿ ಕಾಲೇಜಿನ ಎನ್ನೆಸ್ಸೆಸ್ ಘಟಕ ಜಂಟಿ ವತಿಯಿಂದ ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಿಚಾರಸಂಕಿರಣ ಉದ್ಘಾಟಿಸಿದರು. ನಗರಸಭಾ ಸದಸ್ಯೆ ಕೆ.ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಪ್ರಧಾನ ಜ್ಯುಡೀಶಿಯಲ್ ಮೆಜಿಸ್ಟ್ರೇಟ್ ಮುಜೀಬ್ ರಹಮಾನ್ ಮುಖ್ಯ ಭಾಷಣ ಮಾಡಿದರು.ಕಾಸರಗೋಡು ಸರ್ಕಾರಿ ಕಾಲೇಜಿನ ಎನ್ನೆಸ್ಸೆಸ್ ಕಾರ್ಯಕ್ರಮ ಸಂಚಾಲಕ ಆಸಿಫ್ ಇಕ್ಬಾಲ್ ಕಕ್ಕಾಶ್ಶೇರಿ ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಸಂರಕ್ಷಣಾಧಿಕಾರಿ ಎಂ.ವಿ.ಸುನಿತಾ ಸ್ವಾಗತಿಸಿದರು. ಜಿಲ್ಲಾ ಸಮಾಜನೀತಿ ಅಧಿಕಾರಿ ಬಿ.ಭಾಸ್ಕರನ್ ವಂದಿಸಿದರು.